ಚಾಮರಾಜನಗರ: ಕಾಂಗ್ರೆಸ್ ನವರು ಕಳ್ಳರು, ಭ್ರಷ್ಟಾಚಾರಿಗಳು, ಅದು ಭಯೋತ್ಪಾದಕರ ಪಕ್ಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜನಗರದಲ್ಲಿ ಬಿಜೆಪಿ ಪ್ರಕೋಷ್ಟಗಳ ಸಭೆಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಸ್ವಾತಂತ್ರ್ಯ ಸಿಕ್ಕ ಬಳಿಕ ಕಾಂಗ್ರೆಸ್ ವಿಸರ್ಜನೆ ಮಾಡಬೇಕು ಎಂದು ಸ್ವತಃ ಮಹಾತ್ಮಾ ಗಾಂಧೀಜಿ ಅವರು ಹೇಳಿದ್ದರು.
ಕಾರಣ ಕಾಂಗ್ರೆಸ್ ಆಡಳಿತ ಮಾಡಿದರೆ ರಾಮರಾಜ್ಯ ಆಗಲ್ಲ, ರಾವಣ ರಾಜ್ಯ ನಿರ್ಮಾಣವಾಗುತ್ತೆ ಎಂಬುದು ಅವರಿಗೂ ಗೊತ್ತಿತ್ತು. ಇಂದಿರಾ ಗಾಂಧಿ ಕಾಲಾವಧಿಯಲ್ಲಿ ಭಯೋತ್ಪಾದನೆ ಆರಂಭವಾಯಿತು. ಆಗ ಬಾಂಬ್ ಕಾರ್ಖಾನೆಗಳು ಆರಂಭವಾದವು ಎಂದು ಕಿಡಿಕಾರಿದ್ದಾರೆ.
ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್ ಸರ್ಕಾರದ ವರೆಗೂ ಕಾಂಗ್ರೆಸ್ ಕಾಲದಲ್ಲಿ ಹಗರಣಗಳು ನಡೆದಿವೆ. ಕಾಂಗ್ರೆಸ್ ಭ್ರಷ್ಟಾಚಾರದ ಪಿತಾಮಹ. ಪರ್ಸಂಟೇಜ್ ಅಂದ್ರೆ ಕಾಂಗ್ರೆಸ್. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಜೈಲೆ ಹೋಗ್ತಾರೆ. ಜೈಲಿಗೆ ಹೋಗುವ ಭಯದಿಂದಲೇ ಲೊಕಾಯುಕ್ತ ಮುಚ್ಚಿ ಹಾಕಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ.