ಬೆಂಗಳೂರು: ವಿಧಾನಸೌಧದಲ್ಲಿ 10.5 ಲಕ್ಷ ರೂಪಾಯಿ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಇಂಜಿನಿಯರ್ ಜಗದೀಶ್ ಗೆ ಬೆಂಗಳೂರಿನ ಒಂದನೇ ಎಂಎಂಟಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಜಗದೀಶ್ ವಿಧಾನಸೌಧ ಆವರಣದಲ್ಲಿ 10.5 ಲಕ್ಷ ರೂ.
ಸಿಕ್ಕಿಬಿದ್ದಿದ್ದು ಅವರನ್ನು ಬಂಧಿಸಲಾಗಿತ್ತು. ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ನಂತರ ಪರಾರಿಯಾಗಿದ್ದ ಜಗದೀಶ್ ನಂತರ ವಿಚಾರಣೆಗೆ ಆಗಮಿಸಿದ್ದು ಅವರನ್ನು ಬಂಧಿಸಲಾಗಿತ್ತು.
ಅವರ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ವಿಧಾನಸೌಧದಲ್ಲಿ ಇಷ್ಟೊಂದು ನಗದು ಪತ್ತೆಯಾಗಿರುವ ವಿಚಾರ ಆಡಳಿತ ಮತ್ತು ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.