ಯಾವುದೇ ಹುಡುಗಿಯರನ್ನು ನೋಡಿ ಮೇಕಪ್ ಇಲ್ಲದಿದ್ದರೂ ಪರವಾಗಿಲ್ಲ ಲಿಪ್‌ಸ್ಟಿಕ್ ಮಾತ್ರ ಬೇಕೇ ಬೇಕು ಅನ್ನುತ್ತಾರೆ. ಯಾಕೆಂದರೆ ತುಟಿಗೆ ಸ್ವಲ್ಪ ಬಣ್ಣ ಹಚ್ಚಿದರೆ ಮುಖ ಫ್ರೆಶ್ ಆಗಿ ಕಾಣುತ್ತದೆ ಅನ್ನೋ ಸಮಾಧಾನ. ಆದರೆ ಯಾವಾಗಲೂ ಲಿಪ್‌ಸ್ಟಿಕ್ ಹಚ್ಚುವುದು ಅಷ್ಟು ಒಳ್ಳೆಯದಲ್ಲ.
ಅದರ ಬದಲು ಮನೆಯಲ್ಲೇ ಸಿಗುವ ಕೆಲ ವಸ್ತುಗಳಿಂದ ತುಟಿಯ ಆರೈಕೆ ಮಾಡಿಕೊಳ್ಳಬಹುದು. ಅದು ಹೇಗೆ ಎಂದು ನೀವೇ ನೋಡಿ.
* ತೆಂಗಿನಕಾಯಿಯನ್ನು ತುರಿದು ಹಾಲು ತೆಗೆದು ತುಟಿಗಳಿಗೆ ಸವರಿದರೆ ತುಟಿಗಳು ಮೃದುವಾಗುತ್ತದೆ ಹಾಗೂ ಕಪ್ಪಾಗಿ ಕಾಣುವುದು ಕಡಿಮೆಯಾಗುತ್ತದೆ.
* ಕ್ಯಾರೆಟ್ ಹಾಗೂ ಹಸಿ ಸೌತೆಕಾಯಿ ಹೆಚ್ಚಾಗಿ ಸೇವಿಸಿದರೆ ತುಟಿಯು ಯಾವಾಗಲೂ ಹೊಳೆಯುತ್ತಿರುತ್ತದೆ.
* ಗುಲಾಬಿ ದಳಗಳನ್ನು ಚೆನ್ನಾಗಿ ಅರೆದು ತುಟಿಗಳಿಗೆ ಲೇಪಿಸಿದರೆ ತುಟಿಯ ಬಣ್ಣ ರಂಗು ಪಡೆದುಕೊಳ್ಳುತ್ತದೆ.
* ಮಲಗುವ ಮುನ್ನ ನಿತ್ಯ ಬೀಟ್ ರೂಟ್ ರಸವನ್ನು ತುಟಿಗೆ ಲೇಪಿಸುವುದರಿಂದ ಅದರ ಬಣ್ಣ ಕೆಂಪಾಗುತ್ತದೆ.
* ನಿಂಬೆಹಣ್ಣಿನ ರಸದಿಂದ ತುಟಿಗಳನ್ನು ಆಗಾಗ ಮಸಾಜ್ ಮಾಡುತ್ತಿದ್ದರೆ, ತುಟಿಯು ಕಪ್ಪಾಗುವುದನ್ನು ತಡೆಯಬಹುದು.