ಇಲ್ಲಿನ ಸೆಂಟ್ರಲ್ ಸೆನೆಗಲ್ನಲ್ಲಿ ಎರಡು ಬಸ್ಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 40 ಮಂದಿ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಈ ಘಟನೆ ನಡೆದಿದೆ. ಅಪಘಾತ ಕುರಿತು ದೇಶದ ಅಧ್ಯಕ್ಷ ಮಾಕೆ ಸಾಲ್ ಟ್ವೀಟ್ ಮಾಡಿದ್ದು, ಕ್ಯಾಫೆರಿನ್ ಪ್ರದೇಶದ ಗ್ನಿವಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ 3.30ಕ್ಕೆ ಅಪಘಾತ ನಡೆದಿದೆ ಎಂದು ತಿಳಿಸಿದ್ದಾರೆ.
ಮೂರು ದಿನ ಶೋಕಾಚರಣೆ: ಈ ಅನಾಹುತ ಘಟಿಸಿದ ಹಿನ್ನೆಲೆಯಲ್ಲಿ ಮೂರು ದಿನ ಶೋಕಾಚಾರಣೆಯನ್ನು ಅವರು ಘೋಷಿಸಿದ್ದು, ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸಲು ಸೂಚನೆ ನೀಡಿದ್ದಾರೆ. ಇದೇ ವೇಳೆ, ಅವರು ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಚರ್ಚಿಸಲು ಅಂತರ ಸಚಿವಾಲಯ ಮಂಡಳಿ ಸಭೆ ನಡೆಸುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ರಸ್ತೆ ಸಂಖ್ಯೆ 1ರಲ್ಲಿ ಬಸ್ ಟೈರ್ ಪಂಕ್ಚರ್ ಆಗಿದ್ದು ಎದುರಿನಿಂದ ಬಂದ ಮತ್ತೊಂದು ಬಸ್ಗೆ ಮುಖಾಮುಖಿ ಡಿಕ್ಕಿಯಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಚೀಕ್ ಡಿಯೆಂಗ್ ತಿಳಿಸಿದ್ದಾರೆ.