ಬೆಂಗಳೂರು: ಅಪಾರ್ಟ್ಮೆಂಟ್ ನಿವಾಸಿಗಳ ಸಮಸ್ಯೆಗಳ ಪರಿಹಾರಕ್ಕೆ ಅಪಾರ್ಟ್ಮೆಂಟ್ ಸೆಲ್ ಸ್ಥಾಪನೆ ಮಾಡುತ್ತೇವೆ ಎಂದು ಎಐಸಿಸಿ ಸಂಶೋಧನ ವಿಭಾಗದ ಮುಖ್ಯಸ್ಥರಾದ ಪ್ರೋ.
ರಾಜೀವ್ ಗೌಡ ಅಭಿಪ್ರಾಯ ಪಟ್ಟಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಐಸಿಸಿ ಕಾರ್ಯಾದರ್ಶಿ ಅಭಿಷೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಅಪಾರ್ಟ್ಮೆಂಟ್ ನಿವಾಸಿಗಳ ಸಮಸ್ಯೆಗೆ ಶಾಶ್ವತ ಸೆಲ್ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ.
ಅಪಾರ್ಟ್ಮೆಂಟ್ ನಿವಾಸಿಗಳ ಅಸೋಸಿಯೇಶನ್ ಒಳಗೊಂಡು ಸೆಲ್ ಸ್ಥಾಪನೆ ಆಗಲಿದೆ. ಬರೀ ಐಟಿ – ಬಿಟಿ ಅಲ್ಲ ನಾಟಿ ಜನರ ಬಗ್ಗೆಯೂ ನಾವು ಗಮನ ಕೊಡ್ತೇವೆ. ಅಪಾರ್ಟ್ಮೆಂಟ್ ನಿವಾಸಿಗಳ ಸಮಸ್ಯೆಗಳ ಪರಿಹಾರಕ್ಕೆ ಈ ಸೆಲ್ ಸ್ಥಾಪನೆ ಮಾಡುತ್ತಿದ್ದೇವೆ ಎಂದು ವಿವರಿಸಿದರು. ಅದಕ್ಕಿಂತ ಮೊದಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಅಪಾರ್ಟ್ಮೆಂಟ್ ಅಸೋಸಿಯೇಷನ್ ಹಾಗೂ ನಿವಾಸಿಗಳೊಂದಿಗೆ ಸಮಾವೇಶ ಮಾಡುತ್ತೇವೆ. ಆ ಬಳಿಕ ಅವರೊಂದಿಗೆ ಚರ್ಚಿಸಿ ಸೆಲ್ ಸ್ಥಾಪನೆ ಮಾಡಲಿದ್ದೇವೆ. ಯಾರದ್ದೊ ತಪ್ಪಿಗೆ ಅಪಾರ್ಟ್ಮೆಂಟ್ ನಿವಾಸಿಗಳು ಪ್ರವಾಹ ಪೀಡಿತಕ್ಕೆಒಳಗಾಗಿದ್ದಾರೆ. ಈ ಸೆಲ್ ಚುನಾವಣೆ ದೃಷ್ಟಿಯಿಂದ ರಚನೆ ಮಾಡುತ್ತಿಲ್ಲ. ಇದು ಶಾಶ್ವತವಾಗಿ ಅಪಾರ್ಟ್ಮೆಂಟ್ ನಿವಾಸಿಗಳ ಬಗ್ಗೆ ಗಮನ ಕೊಡಲಿದೆ ಎಂದು ವಿವರಿಸಿದರು.