ಬೆಂಗಳೂರು: ತಂದೆಯ ಸಾಲಕ್ಕೆ ಭದ್ರತೆಯಾಗಿ ಚೆಕ್ ನೀಡಿದ ಮಗ ಸಾಲಕ್ಕೆ ಬಾಧ್ಯಸ್ಥ ಎಂದು ಹೈಕೋರ್ಟ್ ಏಕ ಸದಸ್ಯ ಪೀಠದಿಂದ ತೀರ್ಪು ನೀಡಲಾಗಿದೆ.ಪ್ರಸಾದ್ ಅವರಿಂದ ದಿನೇಶ್ ತಂದೆ ಭರಮಪ್ಪ 2.6 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಸಾಲ ತೀರಿಸುವ ಮೊದಲೇ ಭರಮಪ್ಪ ಮೃತಪಟ್ಟಿದ್ದರು. ಸಾಲ ಹಿಂತಿರುಗಿಸುವಂತೆ ಪುತ್ರನ ಬಳಿ ಕೇಳಿದಾಗ ಚೆಕ್ ನೀಡಿದ್ದರು.
ಬಡ್ಡಿ ಸಹಿತ 4.5 ಲಕ್ಷ ರೂಪಾಯಿಗೆ ನೀಡಿದ್ದ ಚೆಕ್ ಬೌನ್ಸ್ ಆಗಿದ್ದು, ಸಾಲ ಪಡೆದವರು ಮೃತಪಟ್ಟಿದ್ದರಿಂದ ತಾನು ಬಾಧ್ಯಸ್ಥನಲ್ಲವೆಂದು ಮಗ ವಾದ ಮಂಡಿಸಿದ್ದರು. ಪುತ್ರನ ವಾದವನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಹೈಕೋರ್ಟ್ ಪೀಠ ತಂದೆಯ ಸಾಲಕ್ಕೆ ಪ್ರತಿಯಾಗಿ ಚೆಕ್ ನೀಡಿರುವುದರಿಂದ ಮಗ ಬಾಧ್ಯಸ್ಥ ಎಂದು ತೀರ್ಪು ನೀಡಿದೆ. ಖಾತರಿದಾರ ಸಾಲಕ್ಕೆ ಹೇಗೆ ಬಾಧ್ಯಸ್ಥನೋ ಅದೇ ರೀತಿ ಚೆಕ್ ನೀಡಿದ ಪುತ್ರನೂ ಬಾಧ್ಯಸ್ಥ ಎಂದು ಈ ಕುರಿತಾಗಿ ಜೆಎಂಎಫ್‌ಸಿ ಕೋರ್ಟ್ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.