ಬೆಂಗಳೂರು: ಆರ್ ಎಸ್ ಎಸ್ ನವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಮನುಸ್ಮೃತಿಯಲ್ಲಿ ನಂಬಿಕೆಯಿಟ್ಟವರು ಸಂವಿಧಾನವನ್ನು ಗೌರವಿಸಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹಿಂದೂ-ಮುಸ್ಲಿಂ ಒಟ್ಟಾಗಿ ಇರಬೇಕು ಎಂದು ಮಹಾತ್ಮಾ ಗಾಂಧಿ ಹೇಳಿದ್ದೇ ತಪ್ಪಾಯ್ತಾ?
ಹಿಂದೂ ಮಹಾಸಭಾದವರು ಮಹಾತ್ಮಾ ಗಾಂಧೀಜಿ ಅವರನ್ನೇ ಕೊಂದರು. ವೀರ ಸಾವರ್ಕರ್ ವಿರುದ್ಧ ಗಾಂಧೀಜಿ ಕೊಂದ ಆರೋಪವಿದೆ. ಅಂತಹ ಆರೋಪವಿರುವ ಸಾವರ್ಕರ್ ಫೋಟೋವನ್ನು ವಿಧಾನಸಭೆಯಲ್ಲಿ ಹಾಕುವ ಮಟ್ಟಕ್ಕೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ವಿವೇವಕವಿಲ್ಲದವರ ಸರ್ಕಾರ ಇದೆ. ಮಹಾತ್ಮಾ ಗಾಂಧೀಜಿಯವರನ್ನೇ ವಿವಾದಾತ್ಮಕ ವ್ಯಕ್ತಿಯನ್ನಾಗಿ ಮಾಡಿದ್ದಾರೆ. ಗಾಂಧೀಜಿಯವರು ಮನುಷತ್ವಕ್ಕೆ ಒತ್ತು ಕೊಟ್ಟವರು. ಮನುಷತ್ವವನ್ನೇ ವಿರೋಧಿಸುವವರು ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಈ ಸರ್ಕಾರದ ಆಯಸ್ಸು ಮೂರು ತಿಂಗಳು ಮಾತ್ರ. ಬಳಿಕ ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.