ಬೆಂಗಳೂರು: ಒನ್ ನೇಷನ್ ಒನ್ ಯೂನಿಫಾರಂ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ರಾಜ್ಯ ಗೃಹ ಇಲಾಖೆ ಸಮ್ಮತಿ ನೀಡಿದೆ.
ಎಲ್ಲಾ ರಾಜ್ಯಗಳ ಪೊಲೀಸರಿಗೆ ಅನ್ವಯವಾಗುವಂತೆ ಒಂದೇ ರೀತಿಯ ಸಮವಸ್ತ್ರ ನೀತಿ ಜಾರಿಗೆ ತರಲಾಗುವುದು.
ಒಂದೇ ರೀತಿಯ ಸಮವಸ್ತ್ರ ಪದ್ಧತಿ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಎಲ್ಲಾ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಲಾಗಿತ್ತು. ಇದಕ್ಕೆ ವ್ಯವಸ್ಥೆ ಜಾರಿಗೆ ಕರ್ನಾಟಕ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.