ತುಮಕೂರು: ಜಮೀನು ವಿವಾದಕ್ಕೆ 84 ಸಸಿಗಳನ್ನು ತೆಂಗಿನ ಸಸಿಗಳನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಅಣೆಕಟ್ಟೆ ಗ್ರಾಮದ ಶಿವಮ್ಮ ಎಂಬುವರಿಗೆ ಸೇರಿದ ಜಮೀನಿನಲ್ಲಿ ಘಟನೆ ನಡೆದಿದೆ.
ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಅಣೆಕಟ್ಟೆ ಗ್ರಾಮದಲ್ಲಿ ಎರೇಹಳ್ಳಿ ಸರ್ವೇ ನಂಬರ್ 21ರ ಸಾಗುವಳಿ ಜಮೀನಿನಲ್ಲಿ ಕೃತ್ಯ ನಡೆದಿದೆ.
ಘಟನೆ ಸಂಬಂಧ ವಿಶ್ವನಾಥ್, ಕುಮಾರ್ ಎಂಬುವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್ ದಾಖಲಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಲಾಗಿದೆ.
ಕಂಡವರ ಜಮೀನಿಗೆ ಹೋದರೆ ಹೀಗೆ ಮಾಡೋದು ಎಂದು ಪೋಸ್ಟ್ ಹಾಕಲಾಗಿದೆ. ಕೃತ್ಯದ ಬಳಿಕ ಆರೋಪಿ ಕುಮಾರ್ ಫೇಸ್ಬುಕ್ ಪೋಸ್ಟ್ ಮಾಡಿರುವುದಾಗಿ ಆರೋಪಿಸಲಾಗಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.