ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕಿಸ್ತಾನದ 19 ವರ್ಷದ ಯುವತಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಇಕ್ರಾ ಜೀವನಿ ಬಂಧಿತ ಯುವತಿ. ಈಕೆ ನೇಪಾಳ ಮೂಲಕ ಭಾರತದ ಗಡಿ ದಾಟಿ ಬಂದಿದ್ದಳು. ಬಳಿಕ ಡೇಟಿಂಗ್ ಆಪ್ ಮೂಲಕ ಪರಿಚಯವಾಗಿ ಉತ್ತರ ಪ್ರದೇಶ ಮೂಲದ ಮುಲಾಯಂ ಸಿಂಗ್ ಎಂಬಾತನನ್ನು ವಿವಾಹವಾಗಿದ್ದಳು.
ಬಳಿಕ ಬೆಂಗಳೂರಿಗೆ ಬಂದು ಸರ್ಜಾಪುರ ರಸ್ತೆಯ ಜುನ್ನಸಂದ್ರಬಳಿ ವಾಸವಾಗಿದ್ದಳು.
ಬೆಂಗಳೂರಿನಲ್ಲಿದ್ದುಕೊಂಡು ಈಕೆ ಪಾಕಿಸ್ತಾನದಲ್ಲಿದ್ದ ತನ್ನ ತಾಯಿಯನ್ನು ಸಂಪರ್ಕಿಸಲು ಯತ್ನಿಸಿದ್ದಳು. ತನ್ನ ಹೆಸರು ಬದಲಿಸಿಕೊಂಡು ಪಾಕ್ ಪಾಸ್ ಪೋರ್ಟ್ ಗೂ ಅರ್ಜಿ ಸಲ್ಲಿಸಿದ್ದಳು ಎಂಬ ಮಾಹಿತಿ ವಿಚಾರಣೆ ವೇಳೆ ಲಭ್ಯವಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಇಕ್ರಾ ಜೀವನಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.