Spread the love

ಕಾಬೂಲ್​: ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರದಿಂದ ಅಲ್ಲಿನ ಮಹಿಳೆಯರ ಪಾಡು ಹೇಳತೀರದು. ಮಹಿಳೆಯರನ್ನು ಹಿಂಸಿಸಿದ್ದು ಸಾಲದು ಎಂಬಂತೆ ಈಗ ತಾಲಿಬಾನಿಗಳ ದೃಷ್ಟಿ ಗೊಂಬೆಗಳತ್ತಲೂ ಬೀರಿದೆ. ಈ ಹಿಂದೆ ಹೆಣ್ಣು ಗೊಂಬೆಗಳ ಶಿರಚ್ಛೇದನಕ್ಕೆ ಆದೇಶ ಹೊರಡಿಸಲಾಗಿತ್ತು.ಇದಕ್ಕೆ ಕೆಲವು ದೇಶಗಳಲ್ಲಿ ವಿರೋಧ ವ್ಯಕ್ತವಾಗಿತ್ತು.

ಆದರೆ ಸುಮ್ಮನಿರದ ತಾಲಿಬಾನಿಗಳು ಮನುಷ್ಯಾಕೃತಿಗಳ ಗೊಂಬೆಗಳ ಮುಖಗಳನ್ನು ಮುಚ್ಚಲು ಆದೇಶಿಸಿದ್ದಾರೆ. ಪಾಲಿಥಿನ್ ಬ್ಯಾಗ್‌ಗಳು, ಸ್ಕಾರ್ಫ್‌ಗಳು ಮತ್ತು ಫಾಯಿಲ್‌ನಿಂದ ಮನುಷ್ಯಾಕೃತಿಗಳ ಮುಖವನ್ನು ಮುಚ್ಚಲು ಅಂಗಡಿಕಾರರನ್ನು ಒತ್ತಾಯಿಸಿದ್ದಾರೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಅಂಗಡಿಗಳಲ್ಲಿ ಈ ರೂಲ್ಸ್​ ಜಾರಿಗೆ ತರಲಾಗಿದೆ.

ಸಾರಾ ವಹೇದಿ ಎಂಬ ಅಫ್ಘಾನಿಸ್ತಾನದ ಮಾನವತಾವಾದಿಯ ಪೋಸ್ಟ್ ಕೂಡ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದೆ. ಪೋಸ್ಟ್‌ನಲ್ಲಿ ಗೊಂಬೆಗಳ ಮುಖಗಳು ಫಾಯಿಲ್ ಅಥವಾ ಸ್ಕಾರ್ಫ್‌ಗಳಿಂದ ಮುಚ್ಚಲಾಗಿದೆ. “ಮಹಿಳೆಯರ ಮೇಲಿನ ತಾಲಿಬಾನಿಗಳ ದ್ವೇಷವು ದೇಶವನ್ನು ಮೀರಿ ವಿಸ್ತರಿಸಿದೆ ಎಂದು ಹಲವರು ಉಲ್ಲೇಖಿಸುತ್ತಿದ್ದಾರೆ.


Spread the love

By admin