Spread the love

ಸ್ತನ್ಯಪಾನ ಮಾಡಿಸುವಾಗ ತನ್ನ ತೊಟ್ಟು ಬಿದ್ದಿದೆ ಎಂದು ಟಿಕ್​ಟಾಕ್​ ಸ್ಟಾರ್ ಜಾಸ್ಮಿನ್ ಚಿಸ್ವೆಲ್ ಹೇಳಿಕೊಂಡಿದ್ದಾರೆ. ಇವರು ಹಾಲಿವುಡ್ ಐಕಾನ್ ದಿವಂಗತ ಮರ್ಲಿನ್ ಮನ್ರೋ ಅವರಂತೆ ವೇಷ ಧರಿಸಿದಾಗಿನಿಂದ ಬಹಳ ಪ್ರಸಿದ್ಧಿಗೆ ಬಂದವರು. ಇದೀಗ ಈಕೆ, ಹಾಲುಣಿಸುವ ಸಮಯದಲ್ಲಿ ತನ್ನ ಒಂದು ವರ್ಷದ ಮಗ ಕಚ್ಚಿದ ನಂತರ ತನ್ನ ತೊಟ್ಟು ಬಿದ್ದು ಹೋಗಿದೆ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

 

ಮರ್ಲಿನ್ ಮನ್ರೋ ಅವರಂತೆ ಧರಿಸಿರುವ ಕಂಟೆಂಟ್ ಅನ್ನು ಪೋಸ್ಟ್ ಮಾಡಲು ಪ್ರಸಿದ್ಧರಾಗಿರುವ ಚಿಸ್ವೆಲ್ ತಮ್ಮ 16.4 ಮಿಲಿಯನ್ ಅನುಯಾಯಿಗಳಿಗೆ, ನನ್ನ ಮೊಲೆ ತೊಟ್ಟು ಬಿದ್ದು ಹೋಗಿದೆ. ನಾನು ಆಘಾತಕ್ಕೊಳಗಾಗಿದ್ದೇನೆ ಎಂದಿದ್ದಾರೆ. ನನ್ನ ಮಗ ಹಾಲು ಕುಡಿಯಲು ತೊಡಗಿದಾಗ ನನಗೆ ತುಂಬಾ ನೋವಾಯಿತು. ಏನು ಎಂದು ನೋಡಿದಾಗ ನನ್ನ ತೊಟ್ಟು ಅವನ ಬಾಯಿಯಲ್ಲಿತ್ತು. ನಾನು ಭಯದಿಂದ ಕಿರುಚಿದೆ ಎಂದು ಆಕೆ ಹೇಳಿಕೊಂಡಿದ್ದಾರೆ.

ನನ್ನ ತಾಯಿ ಇದನ್ನು ಮರು ಜೋಡಿಸಲು ಸಾಧ್ಯವಿದೆ ಎಂದಿರುವ ಕಾರಣ ಅದಕ್ಕಾಗಿ ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ. ಹಲ್ಲು ಹೊಂದಿರುವ ಮಗು ಹೆಚ್ಚು ಮೊಲೆ‌ ತೊಟ್ಟುಗಳ ಗಾಯವನ್ನು ಉಂಟುಮಾಡುವ ಸಾಧ್ಯತೆ ಇದೆ. ಆದರೆ ಇದು ಮಾತ್ರ ಅಸಾಮಾನ್ಯವಾಗಿದೆ ಎಂದು ಹಲವರು ಹೇಳಿದ್ದಾರೆ.


Spread the love

By admin