ವಿಲಕ್ಷಣ ಪ್ರಕರಣದಲ್ಲಿ ಬೀದಿ ನಾಯಿಯೊಂದು ಸಿಕ್ಕ ಸಿಕ್ಕವರಿಗೆ ಕಚ್ಚಿದ್ದು, ಇದರ ಪರಿಣಾಮ 70 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಅರ ಪಟ್ಟಣದಲ್ಲಿ ನಡೆದಿದೆ.ಅರ ಪಟ್ಟಣದ ಶಿವಗಂಜ್, ಶಿಟ್ಲಾಟೋಲಾ, ಮಹದೇವ ರಸ್ತೆ ಹಾಗೂ ಸದರ್ ಆಸ್ಪತ್ರೆ ಪ್ರಾಂತ್ಯದಲ್ಲಿ ಬುಧವಾರದಂದು ಈ ಘಟನೆ ನಡೆದಿದೆ.
ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.ನಾಯಿ ಈ ರೀತಿ ಏಕಾಏಕಿ ದಾಳಿ ಮಾಡಿರುವುದರಿಂದ ಜನ ರಸ್ತೆಯಲ್ಲಿ ಓಡಾಡಲು ಭಯಭೀತರಾಗಿದ್ದರು. ಇದೀಗ ಸ್ಥಳೀಯಾಡಳಿತ ಈ ನಾಯಿಯನ್ನು ಸೆರೆ ಹಿಡಿಯಲು ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.