ಮೈಸೂರು: ರಾಜಕೀಯ ನಿವೃತ್ತಿ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ನಾಯಕರ ಮನಸ್ಸಿನಲ್ಲಿರುವ ಮಾತು ಹೊರಬಂದಿದೆ. ನಾವೇನು ಸನ್ಯಾಸತ್ವದ ಮಾತು ಆಡಿರಲಿಲ್ಲ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶಾದಿಭಾಗ್ಯ ಜಾರಿಗೆ ತಂದಿದ್ದರಿಂದಲೇ ಸಿದ್ದರಾಮಯ್ಯಗೆ ದೌರ್ಭಾಗ್ಯ ಬಂತು. ಈಗಲೂ ಅದನ್ನು ಮುಂದುವರೆಸಿದರೆ ಅವರ ಪಕ್ಷಕ್ಕೂ ದೌರ್ಭಾಗ್ಯ ಬರಲಿದೆ ಎಂದು ಹೇಳಿದರು.
ಇದೇ ವೇಳೆ ಬಜೆಟ್ ಬಗ್ಗೆ ಮಾತನಾಡಿದ ಸಿಎಂ, ಕಳೆದ ಬಾರಿಯಂತೆಯೇ ಈ ಬಾರಿಯೂ ಜನಪರ ಬಜೆಟ್ ಮಂಡಿಸುತ್ತೇವೆ. ರಾಜ್ಯದ ಜನರು ಉತ್ತಮ ಬಜೆಟ್ ನಿರೀಕ್ಷೆ ಮಾಡಬಹುದು. ಇನ್ನು ಪ್ರಣಾಳಿಕೆಯಲ್ಲಿ ನಾವು ಘೋಷಿಸಿರುವ ಯೋಜನೆಗಳು ಎಷ್ಟು ಈಡೇರಿವೆ ಎಂಬುದನ್ನು ಬಜೆಟ್ ಸಮಯದಲ್ಲಿ ವರದಿ ಕೊಡುತ್ತೇವೆ ಎಂದು ತಿಳಿಸಿದರು