Spread the love

ಪ್ರಧಾನಿ ನರೇಂದ್ರ ಮೋದಿಯವರು ಬಾನುಲಿ ಮೂಲಕ ದೇಶದ ಜನತೆಯೊಂದಿಗೆ ಕನೆಕ್ಟ್ ಆಗುವ ‘ಮನ್ ಕೀ ಬಾತ್’ ಈಗಾಗಲೇ 96 ಆವೃತ್ತಿಗಳನ್ನು ಪೂರೈಸಿದೆ. ಇಂದು 97ನೇ ಆವೃತ್ತಿ ಪ್ರಸಾರವಾಗಲಿದ್ದು, ಏಪ್ರಿಲ್ 30ಕ್ಕೆ 100ನೇ ಆವೃತ್ತಿ ತಲುಪಲಿದೆ.

ಈ ಜನಪ್ರಿಯ ಕಾರ್ಯಕ್ರಮದ ನೂರನೇ ಆವೃತ್ತಿಯನ್ನು ವಿಶೇಷ ರೀತಿಯಲ್ಲಿ ನಡೆಸಲು ಮುಂದಾಗಿರುವ ಆಕಾಶವಾಣಿ, ಈ ಸಂದರ್ಭದಲ್ಲಿ ಲೋಗೋ ಹಾಗೂ ಜಿಂಗಲ್ ಗಳನ್ನು ರೂಪಿಸಲು ಸಾರ್ವಜನಿಕರಿಗೆ ಆಹ್ವಾನಿಸಿದೆ.

 

ಕೇಂದ್ರ ಸರ್ಕಾರದ mygov.in ವೆಬ್ ಸೈಟ್ ನಲ್ಲಿ ನಲ್ಲಿ ಇದಕ್ಕೆ ಸಂಬಂಧಿಸಿದ ತಾಂತ್ರಿಕ ವಿವರಗಳು ಲಭ್ಯವಿದ್ದು, ಆಸಕ್ತರು ಲೋಗೋಗಳನ್ನು JPEG/JPG/PNG/SVG ಫಾರ್ಮ್ಯಾಟ್ ಗಳಲ್ಲಿ ಅಪ್ಲೋಡ್ ಮಾಡಬಹುದಾಗಿದೆ.

ಫೋರ್ಟ್ರೇಟ್ ಅಥವಾ ಲ್ಯಾಂಡ್ ಸ್ಕೇಪ್ ಆಕಾರದಲ್ಲಿ ಲೋಗೋಗಳನ್ನು ವಿನ್ಯಾಸ ಮಾಡಬಹುದಾಗಿದ್ದು, ಲೋಗೋ ಕಳುಹಿಸಲು ಫೆಬ್ರವರಿ 1 ಅಂತಿಮ ದಿನಾಂಕವಾಗಿದೆ. ಆಯ್ಕೆಯಾದ ಲೋಗೋ ವಿನ್ಯಾಸಕಾರರಿಗೆ ಒಂದು ಲಕ್ಷ ರೂಪಾಯಿ ಮೌಲ್ಯದ ಬಹುಮಾನವನ್ನು ನೀಡಲಾಗುತ್ತದೆ.


Spread the love

By admin