ಬೆಂಗಳೂರು: ಮನೆಯ ಮಾಲೀಕರೊಬ್ಬರು ತನ್ನ ಸ್ವಂತ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಉತ್ತರ ತಾಲೂಕಿನ ವಡೇರಹಳ್ಳಿಯಲ್ಲಿ ನಡೆದಿದೆ.
49 ವರ್ಷದ ಶ್ರೀಧರ್ ನೇಣಿಗೆ ಶರಣಾದ ಮನೆ ಮಾಲೀಕ. ಮೃತ ಶ್ರೀಧರ ಗುತ್ತಿಗೆ ಆಧಾರಾದ ಮೇಲೆ ಕೆಲಸ ಮಾಡುತ್ತಿದ್ದರು.
ಇದೀಗ ಏಕಾಏಕಿ ಮನೆಯಲ್ಲಿಯೇ ಸಾವಿಗೆ ಶರಣಾಗಿದ್ದಾರೆ.
ಶ್ರೀಧರ್ ತಮ್ಮದೇ ಮನೆಯನ್ನು ಕಟ್ಟಿಸುತ್ತಿದ್ದರು. ಕಟ್ಟಡ ನಿರ್ಮಾಣ ಕೊನೇ ಹಂತದಲ್ಲಿತ್ತು. ನಿರ್ಮಾಣ ಹಂತದ ಮನೆಯಲ್ಲಿಯೇ ಸೀಲಿನಲ್ಲಿದ್ದ ಹುಕ್ಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.