Spread the love

ರೇಂದ್ರ ಮೋದಿ ಸರ್ಕಾರ 2024ರ ಲೋಕಸಭಾ ಸಮರಕ್ಕೆ ತಯಾರಿ ಆರಂಭಿಸಿದೆ. ಕೇಂದ್ರ ಬಜೆಟ್‌ನಲ್ಲಿ ಮೋದಿ ಸರ್ಕಾರ ಐದು ಪ್ರಮುಖ ರಾಜಕೀಯ ಸಂದೇಶಗಳನ್ನೂ ನೀಡಿದೆ. ಬಡವರಿಗಾಗಿ ವಸತಿ ಯೋಜನೆ, ಕುಡಿಯುವ ನೀರಿನ ಯೋಜನೆ ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಗಳ ಹಂಚಿಕೆಯಲ್ಲಿ ಗಮನಾರ್ಹ ಹೆಚ್ಚಳ, ಆದಿವಾಸಿಗಳಿಗೆ 15,000 ಕೋಟಿ ರೂಪಾಯಿಗಳ ಹೊಸ ಯೋಜನೆ, ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಹೊಸ ತೆರಿಗೆ ಪದ್ಧತಿಯಲ್ಲಿ ಸಡಿಲಿಕೆಗಳು ಇವೆಲ್ಲವೂ 2023ರ ‘ಅಮೃತ್ ಕಾಲ’ ಬಜೆಟ್‌ನಲ್ಲಿ ನರೇಂದ್ರ ಮೋದಿ ಸರ್ಕಾರ ನೀಡಿರುವ ಐದು ಪ್ರಮುಖ ರಾಜಕೀಯ ಸಂದೇಶಗಳಾಗಿವೆ.

 

ದೇಶವು ಮುಂದಿನ ವರ್ಷ ಲೋಕಸಭಾ ಚುನಾವಣೆಯನ್ನು ಎದುರಿಸಲಿದೆ. ಈ ವರ್ಷ ವಿವಿಧ ಪ್ರಮುಖ ರಾಜ್ಯಗಳ ಚುನಾವಣೆಯೂ ನಡೆಯಲಿದೆ. ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಬೆಂಬಲಿಸಿದ ಬಡವರಿಗಾಗಿ ಕಲ್ಯಾಣ ಯೋಜನೆಗಳನ್ನು ಗುರಿಯಾಗಿಟ್ಟುಕೊಂಡು ಸರ್ಕಾರ ತನ್ನ ಕೊನೆಯ ಬಜೆಟ್‌ ಅನ್ನು ಮಂಡಿಸಿದೆ. ಹೊಸ ತೆರಿಗೆ ಪದ್ಧತಿಯಲ್ಲಿನ ಸಡಿಲಿಕೆಗಳು, ಕಡಿಮೆ ಅಥವಾ ಮಧ್ಯಮ ಆದಾಯವನ್ನು ಹೊಂದಿರುವವರಿಗೆ ವಿನಾಯಿತಿ ಹೀಗೆ ಅನೇಕ ಯೋಜನೆಗಳನ್ನು ಪ್ರಕಟಿಸಿದೆ.

ವಸತಿ, ನೀರು, ಚಿಕಿತ್ಸೆ.

ಸರ್ಕಾರ 2024 ರಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 79,950 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ. ಇದು ಕಳೆದ ಬಜೆಟ್‌ಗಿಂತ ಶೇ.66 ರಷ್ಟು ಹೆಚ್ಚಾಗಿದೆ. 2024ರ ವೇಳೆಗೆ ಸುಮಾರು 2.94 ಕೋಟಿ ಬಡವರು ಮನೆ ಪಡೆಯುವ ಗುರಿ ಹೊಂದಿದ್ದು, ಅದರಲ್ಲಿ 2.12 ಕೋಟಿ ಮನೆಗಳನ್ನು ಪೂರ್ಣಗೊಳಿಸಿ ಬಡವರಿಗೆ ಹಸ್ತಾಂತರಿಸಲಾಗಿದೆ.ಮತ್ತೊಂದು ಮಹತ್ವದ ಸಂದೇಶ ಜಲ ಜೀವನ್ ಮಿಷನ್‌ನಲ್ಲಿದೆ. ಇದಕ್ಕಾಗಿ ಬಜೆಟ್‌ನಲ್ಲಿ 70,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಈ ಯೋಜನೆಯು 2024 ರಲ್ಲಿ ಪೂರ್ಣಗೊಳ್ಳುವ ಗುರಿ ಹೊಂದಿದೆ. ದೇಶದ ಎಲ್ಲಾ 20 ಕೋಟಿ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವು


Spread the love

By admin