Spread the love

ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕುದಿಯುತ್ತಿದ್ದ ಎಣ್ಣೆ ಬಾಣಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಅಡ್ಡೂರಿನಲ್ಲಿ ನಡೆದಿದೆ.

ಪೊಳಲಿ ನಿವಾಸಿ 50 ವರ್ಷದ ಪುರಂದರ ಮೃತಪಟ್ಟ ವ್ಯಕ್ತಿಯಾಗಿದ್ದು, ಇವರು ಗುರುವಾರ ಮಧ್ಯಾಹ್ನ ಕಾರ್ಮಿಕರು ಬೇಕರಿಯಿಂದ ಹೊರಗಡೆ ಇದ್ದ ಸಂದರ್ಭದಲ್ಲಿ ಬಾಗಿಲು ಹಾಕಿಕೊಂಡು ಎಣ್ಣೆ ಬಾಣಲೆಗೆ ಹಾರಿದ್ದಾರೆ.

 

ಬಳಿಕ ಸುಟ್ಟ ಗಾಯಗಳಿಂದ ಬೊಬ್ಬೆ ಹೊಡೆದ ಸಂದರ್ಭದಲ್ಲಿ ಕೂಡಲೇ ಬೇಕರಿ ಮಾಲೀಕರು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


Spread the love

By admin