ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳು ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಗ್ರಾಮದಲ್ಲಿ ನಡೆದಿದೆ.
ಬಾಲಕಿ ಲೋಕೇಶ್ ಎಂಬಾತನನ್ನು ಪ್ರೀತಿಸುತ್ತಿದಳು. ಆದರೆ ಇತ್ತೀಚೆಗೆ ಇನ್ನೋರ್ವ ಅಪ್ರಾಪ್ತನೊಂದಿಗೆ ಸುತ್ತಾಟ ನಡೆಸಿದ್ದಳು ಎನ್ನಲಾಗಿದೆ.
ಬೈಕ್ ನಲ್ಲಿ ಇಬ್ಬರೂ ಜಾಲಿ ರೈಡ್ ಹೋಗಿದ್ದನ್ನು ಗಮನಿಸಿದ್ದ ಲೋಕೇಶ್ ಇದನ್ನು ಪ್ರಶ್ನಿಸಿದ್ದಾನೆ. ಇದೇ ವಿಚಾರವಾಗಿ ಪದೇ ಪದೇ ಇಬ್ಬರ ನಡುವೆ ಜಗಳವಾಗಿದೆಯಂತೆ. ಮನನೊಂದ ಬಾಲಕಿ ವಿಷ ಸೇವಿಸಿದ್ದಳು.
ತೀವ್ರ ಅಸ್ವಸ್ಥಗೊಂಡಿದ್ದ ಆಕೆಯನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.