Spread the love

ಬೆಂಗಳೂರು: ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಬದಲು ಸಿಡಿ ಯಾತ್ರೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಬಿಜೆಪಿ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಸಿಡಿಯಲ್ಲಿ ಅವರು ಎಕ್ಸ್‌ಪರ್ಟ್ಸ್ ಇದ್ದಾರೆ. ಅದನ್ನ ತೋರಿಸಿಕೊಂಡು ಓಡಾಡಿ. ಮುನಿರತ್ನ ಇದ್ದಾರಲ್ಲ, ಅವರಿಗೆ ಹೇಳಿ ಒಂದು ಸ್ಕ್ರೀನ್ ರೆಡಿ ಮಾಡ್ತಾರೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಟೀಕಿಸುತ್ತ ಜೋಶಿಯವರ ಬ್ರಾಹ್ಮತ್ವದ ವಿರುದ್ಧ ಹೇಳಿಕೆಯನ್ನು ಹೆಚ್​ ಡಿಕೆ ನೀಡಿದ್ದರು. ಇದನ್ನು ಖಂಡಿಸಿದ್ದ ಬಿಜೆಪಿ ವಕ್ತಾರ ಎನ್.ರವಿಕುಮಾರ್, ‘ಕುಮಾರಸ್ವಾಮಿ ಸತ್ಯ ಹರಿಶ್ಚಂದ್ರ ಅಲ್ಲ. ಅವರ ಬಗ್ಗೆ ಸಿಡಿ, ತಾಜ್ ವೆಸ್ಟೆಂಡ್ ಹೋಟೆಲ್, ಅವರ ಮನೆ, ಅವರ ತೋಟದ ಮನೆ ಇವೆಲ್ಲ ಪ್ರಕರಣಗಳು ನನಗೆ ಗೊತ್ತಿವೆ. ಅವರು ಇದೇ ರೀತಿ ಮಾತನಾಡುತ್ತಿದ್ದರೆ ನಾವು ಕೂಡ ರಾಜಕಾರಣ ಮಾಡಲು ಬಂದವರು ಎಂಬುದನ್ನು ತಿಳಿದುಕೊಳ್ಳಲಿ’ ಎಂದು ಸವಾಲೆಸೆದಿದ್ದರು.


Spread the love

By admin