ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ವ್ಯಕ್ತಿಯೊಬ್ಬರು ಬೈಕ್ ನಲ್ಲಿ ದೇಶ ಸುತ್ತಲು ಹೊರಟಿದ್ದಾರೆ. ವಿಜೋ ವರ್ಗಿಸ್ ಈ ಸಾಹಸಯಾತ್ರೆ ಕೈಗೊಂಡವರಾಗಿದ್ದು ಇಂದಿನಿಂದ ಇದು ಶುರುವಾಗಿದೆ.
ಎರಡೂವರೆ ತಿಂಗಳ ಕಾಲ ಇವರು ಭಾರತದ ಎಲ್ಲ ರಾಜ್ಯಗಳ ಜೊತೆಗೆ ನೇಪಾಳ, ಭೂತಾನ್ ದೇಶಗಳಿಗೂ ಭೇಟಿ ನೀಡಲಿದ್ದಾರೆ.
ಒಟ್ಟು ಹದಿಮೂರು ಸಾವಿರ ಕಿಲೋಮೀಟರ್ ದೂರವನ್ನು ವಿಜೋ ವರ್ಗೀಸ್ ಏಕಾಂಗಿಯಾಗಿ ಕ್ರಮಿಸಲಿದ್ದಾರೆ.
2013-14 ರಲ್ಲಿ ಇವರು ದಕ್ಷಿಣ ಭಾರತದಲ್ಲಿ 7,100 ಕಿಲೋಮೀಟರ್ ಕ್ರಮಿಸಿದ್ದು, ಇದೀಗ ಭಾರತ ಯಾತ್ರೆ ಕೈಗೊಂಡಿದ್ದಾರೆ. ಇವರ ಈ ಸಾಹಸಕ್ಕೆ ಮೂರು ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಹೇಳಲಾಗಿದ್ದು, ತಂದೆ ಪಿ.ಜೆ. ವರ್ಗೀಸ್ ಹಾಗೂ ತಾಯಿ ಜೋಲಿ ವರ್ಗೀಸ್ ಅವರ ಬೆಂಬಲವಿದೆ.2013-14 ರಲ್ಲಿ ಇವರು ದಕ್ಷಿಣ ಭಾರತದಲ್ಲಿ 7,100 ಕಿಲೋಮೀಟರ್ ಕ್ರಮಿಸಿದ್ದು, ಇದೀಗ ಭಾರತ ಯಾತ್ರೆ ಕೈಗೊಂಡಿದ್ದಾರೆ. ಇವರ ಈ ಸಾಹಸಕ್ಕೆ ಮೂರು ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಹೇಳಲಾಗಿದ್ದು, ತಂದೆ ಪಿ.ಜೆ. ವರ್ಗೀಸ್ ಹಾಗೂ ತಾಯಿ ಜೋಲಿ ವರ್ಗೀಸ್ ಅವರ ಬೆಂಬಲವಿದೆ.
ಪ್ರತಿನಿತ್ಯ 350 ರಿಂದ 400 ಕಿಲೋಮೀಟರ್ ಕ್ರಮಿಸುವ ಗುರಿಯನ್ನು ವಿಜೋ ವರ್ಗಿಸ್ ಹೊಂದಿದ್ದು, ತಮ್ಮ ಈ ಪ್ರಯಾಣದಲ್ಲಿ ಎಲ್ಲ ರಾಜ್ಯಗಳ ಮಣ್ಣು ಸಂಗ್ರಹಿಸಿ ಗಣ್ಯ ವ್ಯಕ್ತಿಯೊಬ್ಬರಿಗೆ ನೀಡುವ ಇರಾದೆ ಹೊಂದಿದ್ದಾರೆ. ಸಮಾನತೆ ಹಾಗೂ ರಕ್ತದಾನದ ಬಗ್ಗೆ ಅರಿವು ಮೂಡಿಸುವುದು ಇವರ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ.