Spread the love

ಬೆಂಗಳೂರು: ಮಂಡ್ಯ ಉಸ್ತುವಾರಿ ಸಚಿವರನ್ನು ಮತ್ತೆ ಬದಲಾವಣೆ ಮಾಡಲಾಗಿದ್ದು, ಉಸ್ತುವಾರಿ ಸಚಿವ ಸ್ಥಾನದಿಂದ ಆರ್.ಅಶೋಕ್ ಅವರನ್ನು ಕೈಬಿಡಲಾಗಿದೆ.

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಮಂಡ್ಯ ಉಸ್ತುವಾರಿ ಜವಾಬ್ದಾರಿಯಿಂದ ಸಚಿವ ಆರ್.ಅಶೋಕ್ ಅವರನ್ನು ಮುಕ್ತ ಮಾಡಲಾಗಿದೆ.

ಕಂದಾಯ ಸಚಿವರಾಗಿರುವ ಆರ್.ಅಶೋಕ್ ಅವರಿಗೆ ಬೇರೆಯ ಹಲವು ಕಾರ್ಯಕ್ರಮಗಳ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.

ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಮಂಡ್ಯ ಉಸ್ತುವಾರಿ ಸಚಿವರಾನ್ನಾಗಿ ಜನವರಿ 26ರಂದು ನೇಮಕ ಮಾಡಲಾಗಿತ್ತು. ಆದರೆ ಜಿಲ್ಲೆಯಾದ್ಯಂತ ಆರ್.ಅಶೋಕ್ ವಿರುದ್ಧ ಗೋ ಬ್ಯಾಕ್ ಪೋಸ್ಟರ್ ಅಭಿಯಾನ ಆರಂಭವಾಗಿತ್ತು. ಸಚಿವರ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದಿದ್ದವು.

ಇದರ ಬೆನ್ನಲ್ಲೇ ಮಂಡ್ಯ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯಿಂದ ಮುಕ್ತ ಮಾಡುವಂತೆ ಆರ್.ಅಶೋಕ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯಿಂದ ಆರ್.ಅಶೋಕ್ ಅವರನ್ನು ಮುಕ್ತಗೊಳಿಸಲಾಗಿದೆ.


Spread the love

By admin