ಹಾಸನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪರ ಭವಾನಿ ರೇವಣ್ಣ ಪ್ರಚಾರಕ್ಕಿಳಿದು ಮುನಿಸು ಮರೆತಂತೆ ವರ್ತಿಸಿದ್ದಾರೆ.
ಆರಂಭದಿಂದ್ಲೂ ಹಾಸನ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದ ಭವಾನಿ ರೇವಣ್ಣ ಅವರು ಮಾವ ಹೆಚ್.ಡಿ. ದೇವೇಗೌಡರ ಮಾತಿಗೆ ತಣ್ಣಗಾಗಿದ್ರು.
ಬಳಿಕ ಸ್ವರೂಪ್ ಗೆ ಟಿಕೆಟ್ ನೀಡಿ ಹಾಸನದ ಅಧಿಕೃತ ಅಭ್ಯರ್ಥಿ ಎಂದು ಜೆಡಿಎಸ್ ಘೋಷಿಸಿತ್ತು. ಇದರ ಬೆನ್ನಲ್ಲೇ ಇಂದು ಹಾಸನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭವಾನಿ ರೇವಣ್ಣ ಸ್ವರೂಪ್ ಪರ ಪ್ರಚಾರ ಮಾಡಿದ್ರು.
ನಾನು ಸ್ವರೂಪ್ ನನ್ನು ಮಗನ ರೀತಿ ನೋಡಿದ್ದೇನೆ. ಸ್ವರೂಪ್ ಅವರ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಘೋಷಿಸಿದರು. ಇದೇ ವೇಳೆ ಸ್ವರೂಪ್ ವೇದಿಕೆಯಲ್ಲೇ ಭವಾನಿ ರೇವಣ್ಣನವರ ಕಾಲಿಗೆ ಬಿದ್ದು ನಮಸ್ಕರಿಸಿದ್ರು. ಅತ್ತ ಭವಾನಿ ರೇವಣ್ಣ ಸ್ವರೂಪ್ ಅವರ ಕೈ ಎತ್ತಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿದ್ರು.
ಇದೇ ವೇದಿಕೆಯಲ್ಲಿ ಭವಾನಿ ರೇವಣ್ಣ ಹಾಸನ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಹೇಳಿಕೆ ನೀಡಿದ್ದು ಸ್ವರೂಪ್ ಗೆ ಹಾಸನ ಟಿಕೆಟ್ ನೀಡುವಂತೆ ನಾನೇ ಹೇಳಿದ್ದೆ ಎಂದಿದ್ದಾರೆ. ಹಾಸನ ಟಿಕೆಟ್ ಹಂಚಿಕೆ ವಿಚಾರ ಗೊಂದಲದ ಗೂಡಾಗಿತ್ತು. ಯಾರಿಗೆ ಟಿಕೆಟ್ ಎಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಕುಮಾರಸ್ವಾಮಿಯವರು ಸ್ವರೂಪ್ ಗೆ ಟಿಕೆಟ್ ಕೊಟ್ಟಿದ್ದಾರೆ. ನಾವೇ 3 ಬಾ