ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಮ್ಮ ಸ್ವಕ್ಷೇತ್ರ ಶಿಕಾರಿಪುರವನ್ನು ಪುತ್ರನಿಗೆ ಬಿಟ್ಟು ಕೊಟ್ಟಿದ್ದು, ಬಿ.ವೈ. ವಿಜಯೇಂದ್ರ ಇಂದು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಯಡಿಯೂರಪ್ಪ, ಸಂಸದ ಬಿ.ವೈ.
ರಾಘವೇಂದ್ರ, ಎಂಟಿಬಿ ನಾಗರಾಜ್ ಸೇರಿದಂತೆ ಹಲವು ನಾಯಕರು ಹಾಜರಿದ್ದು, ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ ತಮ್ಮನ್ನು ಆಶೀರ್ವದಿಸಿದಂತೆ ಕ್ಷೇತ್ರದ ಜನತೆ ಪುತ್ರನಿಗೂ ಗೆಲುವು ದೊರಕಿಸಿ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.
ವಿಜಯೇಂದ್ರ ನಾಮಪತ್ರ ಸಲ್ಲಿಕೆ ವೇಳೆ ನಡೆದ ಇಂಟರೆಸ್ಟಿಂಗ್ ಸಂಗತಿ ಎಂದರೆ ಯಡಿಯೂರಪ್ಪನವರು ತಾವು 30 ವರ್ಷಗಳ ಹಿಂದೆ ಬಳಸುತ್ತಿದ್ದ ಅದೃಷ್ಟದ CKR 454 ನಂಬರ್ ನ ಅಂಬಾಸಿಡರ್ ಕಾರಿನಲ್ಲಿ ಆಗಮಿಸಿದ್ದಾರೆ.
ಯಡಿಯೂರಪ್ಪನವರಿಗೆ ಗೆಲುವು ದೊರಕಿಸಿ ಕೊಟ್ಟ ಇದೇ ಬಿಳಿ ಬಣ್ಣದ ಅಂಬಾಸಿಡರ್ ಕಾರಿನಲ್ಲಿ ಅವರು ರಾಜ್ಯದಾದ್ಯಂತ ಸುತ್ತಿ ಪಕ್ಷ ಕಟ್ಟಿದ್ದರು. ಇದೀಗ ಪುತ್ರನ ನಾಮಪತ್ರ ಸಲ್ಲಿಕೆ ವೇಳೆಯೂ ತಮಗೆ ಅದೃಷ್ಟ ತಂದ ಇದೇ ಕಾರನ್ನು ಯಡಿಯೂರಪ್ಪ ಬಳಸಿದ್ದಾರೆ.