Spread the love

ಬೆಂಗಳೂರು;– ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ 10 ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿ ಸುಮಾರು 10,500 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣ ದಾಖಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಡೆಂಗ್ಯೂ ಕೇಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣಗಳು‌ ದೃಡಪಟ್ಟಿದ್ದು, ಬೆಂಗಳೂರು ಒಂದರಲ್ಲೇ 5756 ಕ್ಕೂ ಹೆಚ್ಚು ಡೆಂಗ್ಯೂ ‌ ಪ್ರಕರಣಗಳು ದೃಡಪಟ್ಟಿದೆ. ಡೆಂಗ್ಯೂ ಶಂಕಿತರ ಸಂಖ್ಯೆ ಲಕ್ಷದ ಗಡಿದಾಟಿದೆ. ರಾಜ್ಯದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ರಕ್ತದ ಸ್ಯಾಂಪಲ್ ಪರೀಕ್ಷೆ ನಡೆಸಲಾಗಿದೆ.


Spread the love