ದಾವಣಗೆರೆ: ವಿಷಕಾರಿ ಜೇನು ಜಾತಿಯ ರಾಮ ಹುಳು ಕಡಿದು ವಿಂಡ್ ಪ್ಯಾನ್ ಕಂಪನಿಯ ಸಿಬ್ಬಂದಿ ಮೃತಪಟ್ಟಿದ್ದಾರೆ. ಜಿ.ಪಿ.ಶಿವಕು ಮಾರ ಅಲಿಯಾಸ್ ಬಾಬಣ್ಣ (49) ಸಾವನ್ನಪ್ಪಿದವರು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ವಿಚಿತ್ರವಾಗಿ ಗೂಡು ಕಟ್ಟುವ ಈ ಹುಳು ಶಿವಕುಮಾರ ಅವರಿಗೆ ಕಡಿದ ತಕ್ಷಣ ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಚಿಕಿತ್ಸೆ ಆರಂಭಿಸುವಷ್ಟರಲ್ಲಿ ವ್ಯಕ್ತಿ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.