Spread the love

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಳಿಗೇರಿ-ಬೆವನೂರ ಮಧ್ಯೆ ವಿದ್ಯುತ್ ಕಾಮಗಾರಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸರಬರಾಜು  ಆದ ಪರಿಣಾಮ ಇಬ್ಬರು ವ್ಯಕ್ತಿಗಳು ಮೃತಪಟ್ಟ ಘಟನೆ ಶನಿವಾರ  ಸಂಜೆ ನಡೆದಿದೆ.ಮೃತ ವ್ಯಕ್ತಿಗಳು ರಾಯಬಾಗ ತಾಲ್ಲೂಕಿನ ಹಿಡಕಲ್ ಗ್ರಾಮದವರೆಂದು ಗುರ್ತಿಸಲಾಗಿದೆ. ಹಣಮಂತ ಹಾಲಪ್ಪ ಮಗದುಮ್ (೨೨) ಅಶೋಕ ಮಲ್ಲಪ್ಪ ಮಾಳಿ (೩೫) ಮೃತಪಟ್ಟಿದ್ದಾರೆ.

ಅವರು ಕಳೆದ ಹಲಚಾರು ದಿನಗಳಲ್ಲಿ ಬಾಳಿಗೇರಿ ಮಲಾಬಾದವರೆಗೆ ವಿದ್ಯುತ್ ತಂತಿ ಜಗ್ಗುವ ಕೆಲಸ ನಿರ್ವಹಿಸುತ್ತಿದ್ದರು.ಆಕಸ್ಮಿಕಚಾಗಿ ವಿದ್ಯುತ್ ಸರವರಾಜು ಆದ ನಂತರ ಮೃತಪಟ್ಟರು.ಈ ಘಟನೆ ಕೆಪಿಟಿಸಿಎಲ್ ಅಥಣಿ ಇವರಿಗೆ  ತಿಳಿದ ನಂತರ ಅಧಿಕಾರಿಗಳು ಪರಿಶೀಲಣೆ ಮಾಡಿದರು.ಈ ಪ್ರಕರಣ ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love