ತುಮಕೂರು: ವ್ಯಕ್ತಿಯ ಮೇಲೆ ದರ್ಪ ತೋರಿದ್ದ ಅಮೃತೂರು ಠಾಣೆ ಹೆಡ್ ಕಾನ್ಸ್ ಟೇಬಲ್ ಅವರನ್ನು ಅಮಾನತುಗೊಳಿಸಲಾಗಿದೆ.ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಮೃತೂರು ಹೆಡ್ ಕಾನ್ಸ್ ಟೇಬಲ್ ಕೇಶವ್ ನಾಯ್ಕ್ ಸಸ್ಪೆಂಡ್ ಆದವರು. ರವಿ ಎಂಬುವವರ ಮೇಲೆ ಕೇಶವ್ ನಾಯ್ಕ್ ಹಲ್ಲೆ ನಡೆಸಿ ನಿಂದಿಸಿದ್ದರು.
ಹೆಡ್ ಕಾನ್ಸ್ ಟೇಬಲ್ ದರ್ಪ, ದೌರ್ಜನ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಹೆಡ್ ಕಾನ್ಸ್ ಟೇಬಲ್ ಕೇಶವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿಬಂದಿದ್ದವು. ಇದೀಗ ಕೇಶವ್ ನಾಯ್ಕ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.