Spread the love

ಗುಜರಾತ್​ ವಿಧಾನಸಭೆ ರಣಕಣ ರಂಗೇರಿದೆ. ಮುಂದಿನ ತಿಂಗಳು ನಡೆಯುವ ಮತದಾನಕ್ಕೂ ಮೊದಲು ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಸೂರತ್‌ಗೆ ಭೇಟಿ ನೀಡಿದ್ದು, ಈ ವೇಳೆ ಬಿಜೆಪಿ ಬೆಂಬಲಿಗರು ಕಪ್ಪುಬಾವುಟ ಪ್ರದರ್ಶಿಸಿ ಮೋದಿ ಪರ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ಸೂರತ್​ನ ರುದ್ರಪುರ ಕೊಲ್ಲಿ ಎಂಬ ಪ್ರದೇಶದಲ್ಲಿ ಪ್ರಚಾರಕ್ಕೆ ಬಂದಿದ್ದ ಓವೈಸಿಗೆ ಬಿಜೆಪಿಗಋಊ ಪ್ರತಿಭಟನೆ ಬಿಸಿ ಮುಟ್ಟಿಸಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಓವೈಸಿ ಕಂಡು ಮೋದಿ, ಮೋದಿ ಎಂದು ಘೋಷಣೆ ಕೂಗಿದ್ದಾರೆ. ಕಾರು ತಡೆದು ಕಪ್ಪುಬಾವುಟ ಪ್ರದರ್ಶಿಸಿದ್ದಾರೆ.

ಕಳೆದ ವಾರವಷ್ಟೇ ಅಸಾದುದ್ದೀನ್ ಓವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದು ಬಿಜೆಪಿಗರ ಕೃತ್ಯ ಎಂದು ಆಪಾದಿಸಲಾಗಿತ್ತು. ಈ ಬಗ್ಗೆ ಟೀಕೆ ಮಾಡಿದ್ದ ಓವೈಸಿ ಪ್ರಧಾನಿ ಮೋದಿಯವರೇ ನಿಮ್ಮ ಪಕ್ಷದವರ ಕೃತ್ಯದ ಬಗ್ಗೆ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದ್ದರು. ಇದು ದುರುದ್ದೇಶದಿಂದ ಕೂಡಿರಲಿಲ್ಲ. ದಾಳಿ ಮಾಡುವ ಉದ್ದೇಶವಿರಲಿಲ್ಲ ಎಂದು ಪೊಲೀಸ್​ ತನಿಖೆಯಲ್ಲಿ ಗೊತ್ತಾಗಿತ್ತು. ಘಟನೆಯನ್ನು ಬಿಜೆಪಿ ತಲೆಗೆ ಕಟ್ಟುವ ಓವೈಸಿ ಹೇಳಿಕೆಗೆ ಪ್ರತಿರೋಧವಾಗಿ ಇಂದು ಸೂರತ್​ನಲ್ಲಿ ಬಿಜೆಪಿಗರು ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.


Spread the love