Spread the love

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಇಲ್ಲಿನ ಮೊರ್ಜಿಮ್‌ನಲ್ಲಿ ತಮ್ಮ ವಿಲ್ಲಾವನ್ನು(ನಿವಾಸ) ನೋಂದಾಯಿಸದೇ ‘ಹೋಮ್‌ಸ್ಟೇ’ ಆಗಿ ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹೀಗಾಗಿ ಅವರಿಗೆ ಗೋವಾ ಸರ್ಕಾರ ನೋಟಿಸ್ ಜಾರಿ ಮಾಡಿದ್ದು, ಡಿಸೆಂಬರ್ 8 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ವಾಣಿಜ್ಯ ಪ್ರವಾಸೋದ್ಯಮ ಕಾಯ್ದೆ 1982ರ ಪ್ರಕಾರ, ಗೋವಾದಲ್ಲಿ ಹೋಮ್ ಸ್ಟೇ ನೀಡಲು ನೋಂದಣಿ ಕಡ್ಡಾಯವಾಗಿದೆ.

ನವೆಂಬರ್ 18 ರಂದು ಉತ್ತರ ಗೋವಾದ ಮೋರ್ಜಿಮ್ ಪ್ರದೇಶದಲ್ಲಿರುವ ‘ಕಾಸಾ ಸಿಂಗ್’ ಹೆಸರಿನ ಯುವರಾಜ್ ಸಿಂಗ್​ ಅವರ ವಿಲ್ಲಾದ ವಿಳಾಸಕ್ಕೆ ಪ್ರವಾಸೋದ್ಯಮ ಉಪ ನಿರ್ದೇಶಕ ರಾಜೇಶ್ ಕಾಳೆ ಅವರು ನೋಟಿಸ್ ನೀಡಿದ್ದಾರೆ. ಡಿ.8ರಂದು ಬೆಳಗ್ಗೆ 11 ಗಂಟೆಗೆ ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ನೋಟಿಸ್​ನಲ್ಲಿ ಉಲ್ಲೇಖಿಸಿದ್ದಾರೆ.

ಗೋವಾ ಪ್ರವಾಸೋದ್ಯಮ ಇಲಾಖೆಯ ಅನುಸಾರ ಹೋಟೆಲ್/ಅತಿಥಿ ಗೃಹವನ್ನು ನಿರ್ವಹಿಸಲು ಬಯಸುವ ಪ್ರತಿಯೊಬ್ಬ ವ್ಯಕ್ತಿಯು ನೋಂದಣಿ ಮಾಡಿಸಲೇಬೇಕಿದೆ.


Spread the love