Spread the love

ಬೆಂಗಳೂರು: ಮಂಗಳೂರು ಬಾಂಬ್ ಬ್ಲಾಸ್ಟ್​ನ ಹಿಂದಿನ ಶಾರ್ಟ್ ಫಾರ್ಮ್ ಪತ್ತೆಯಾಗಿದ್ದು, NIA ಅಧಿಕಾರಿಗಳು MBH ಕೋಡ್​​ವರ್ಲ್ಡ್ ಪತ್ತೆ ಮಾಡಿದ್ದಾರೆ. ಬಾಂಗ್ಲಾದೇಶದ ಗಡಿಭಾಗಕ್ಕೆ ತೆರಳಿ ಬಾಂಬ್ ತಯಾರಿ ಕಲಿತಿದ್ದ ಮಾಹಿತಿ ಹೊರಬಿದ್ದಿದ್ದು, ಯಾವ್ಯಾವ ಕಚ್ಚಾ ಸಾಮಗ್ರಿ ಬಳಸಿದ್ರೆ ಯಾವ ರೀತಿ ಸ್ಫೋಟ ಆಗುತ್ತೆ, ಈ ಎಲ್ಲಾ ಸಂಪೂರ್ಣ ಮಾಹಿತಿಯನ್ನ ಶಾರಿಕ್​​​ ಮೊಹ್ಮದ್​ ಕಲೆ ಹಾಕಿದ್ದ. ಬೆಂಗಳೂರಿನಲ್ಲೇ ಕೆಲ ಕೆಮಿಕಲ್ಸ್​ ಕಲೆಕ್ಟ್ ಮಾಡಿದ್ದ ಶಾರಿಕ್,

ಮಂಗಳೂರು ಬ್ಲಾಸ್ಟ್ ಕೇವಲ ದೇವಸ್ಥಾನಕ್ಕೆ ಮಾತ್ರ ಮೀಸಲಿತ್ತು. ಬೆಂಗಳೂರಿನ ಮೆಜೆಸ್ಟಿಕ್, ಬಸವನಗುಡಿ, ಎಂಜಿ ರಸ್ತೆ ಟಾರ್ಗೆಟ್​ ಲಿಸ್ಟ್​ನಲ್ಲಿತ್ತು, ಬಾಂಬ್​ ಸ್ಫೋಟಿಸಿ ಐಸಿಸ್ ಗಮನಸೆಳೆಯೋ ಪ್ಲಾನ್​ ಮಾಡಿದ್ದ ಶಾರಿಕ್, ​​ ಎಲ್ಲಾ ಟಾರ್ಗೆಟ್ ರೀಚ್ ಆದ್ಮೇಲೆ ಕತಾರ್​ಗೆ ಹಾರೋ ಐಡಿಯಾ ಮಾಡಿದ್ದ. ಕತಾರ್​​ಗೆ ಹೋಗಿ ಸ್ಫೋಟದ ಹೊಣೆ ಹೊರುವ ಪ್ಲಾನ್​ ಮಾಡಿಕೊಂಡಿದ್ದ, ಆದರೆ ಆಟೋದಲ್ಲಿ ಸಾಗಿಸುವಾಗಲೇ ಕುಕ್ಕರ್​​​​​ ಸ್ಫೋಟವಾಗಿತ್ತು.


Spread the love

By admin