Spread the love

ಭಾರತದಲ್ಲಿ ಅದರಲ್ಲೂ ಹಿಂದೂಗಳು ತುಳಸಿಯನ್ನು ತುಂಬಾ ಪವಿತ್ರವೆಂದು ಭಾವಿಸುವರು. ತುಳಸಿ ಗಿಡದಲ್ಲಿ ದೇವದೇವತೆಗಳು ನೆಲೆಸಿರುವರು ಎಂದು ಪುರಾಣಗಳು ಕೂಡ ಹೇಳಿವೆ. ಅದೇ ರೀತಿಯಲ್ಲಿ ತುಳಸಿ ಗಿಡವನ್ನು ಪುರಾತನ ಕಾಲದಿಂದಲೂ ಆಯುರ್ವೇದ ದಲ್ಲಿ ಔಷಧಿಯಾಗಿಯೂ ಬಳಸಿಕೊಂಡು ಬರಲಾಗುತ್ತಾ ಇದೆ.ತುಳಸಿ ಎಲೆಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದೆ ಎಂದು ಹೇಳಲಾಗುತ್ತದೆ.

ಖಾಲಿಹೊಟ್ಟೆಯಲ್ಲಿತುಳಸಿಎಲೆಗಳನ್ನುತಿಂದರೆಸಿಗುವಲಾಭಗಳುಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ಸಿಗುವ ಲಾಭಗಳ ಬಗ್ಗೆ ನಿಮಗೆ ತಿಳಿದಿದೆಯೋ ಇಲ್ಲವೋ, ಆದರೆ ಇದರಿಂದ ದೇಹದೊಳಗಿನ ಹಾಗೂ ಹೊರಗಿನ ಆರೋಗ್ಯಕ್ಕೆ ಹಲವಾರು ಲಾಭಗಳೂ ಇವೆ. ತುಳಸಿ ಎಲೆಗಳಲ್ಲಿ ಚಿಕಿತ್ಸಕ ಗುಣಗಳು ಇದೆ ಎಂದು ಹಿಂದಿನಿಂದಲೂ ಪರಿಗಣಿಸಲಾಗಿದೆ.

ಜೀರ್ಣಕ್ರಿಯೆವ್ಯವಸ್ಥೆಆರೋಗ್ಯವಾಗಿಡುವುದುಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಆರೋಗ್ಯವಾಗಿರುವುದು. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಆಗ ದೇಹದಲ್ಲಿನ ಪಿಎಚ್ ಮಟ್ಟವನ್ನು ಅದು ಕಾಪಾಡುವುದು ಮತ್ತು ದೇಹದಲ್ಲಿ ಆಮ್ಲೀಯತೆಯನ್ನು ಕೂಡ ನಿಯಂತ್ರಣದಲ್ಲಿ ಇಡುವುದು.

ಮಾನಸಿಕಒತ್ತಡತಗ್ಗಿಸುವುದುತುಳಸಿ ಎಲೆಗಳಲ್ಲಿ ಇರುವಂತಹ ಅಡಾಪ್ಟೋಜೆನ್ ಎನ್ನುವ ಅಂಶವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದರಿಂದ ನರ ವ್ಯವಸ್ಥೆಗೆ ಆರಾಮವಾಗಲು ನೆರವಾಗುವುದು ಮತ್ತು ರಕ್ತ ಸಂಚಾರವು ಸುಧಾರಣೆ ಆಗುವುದು. ಪ್ರತೀ ಎರಡು ದಿನಕ್ಕೊಮ್ಮೆ ಐದು ತುಳಸಿ ಎಲೆಗಳನ್ನು ಸೇವಿಸಿ.

ಸಾಮಾನ್ಯಶೀತದಿಂದರಕ್ಷಣೆಮಾಡುವುದುಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಜಗಿಯುವುದರಿಂದ ಅಥವಾ ತುಳಸಿ ನೀರು ಕುಡಿದರೆ ಆಗ ಸಾಮಾನ್ಯ ಶೀತದ ಸಮಸ್ಯೆಯು ಪರಿಣಾಮಕಾರಿ ಆಗಿ ನಿವಾರಣೆ ಆಗುವುದು. ತುಳಸಿಯಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇರುವುದೇ ಇದಕ್ಕೆ ಕಾರಣವಾಗಿದೆ.

ಬಾಯಿಯದುರ್ವಾಸನೆತಡೆಯುವುದುತುಳಸಿ ಎಲೆಗಳನ್ನು ಬಾಯಿಯ ದುರ್ವಾಸನೆ ಮತ್ತು ಇತರ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ತುಳಸಿ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ ಮತ್ತು ಇದು ಬಾಯಿಯ ದುರ್ವಾಸನೆಯನ್ನು ತುಂಬಾ ಪರಿಣಾಮಕಾರಿ ಆಗಿ ನಿವಾರಣೆ ಮಾಡುವುದು. ತುಳಸಿ ಎಲೆಗಳನ್ನು ಟೂಥ್ ಪೇಸ್ಟ್ ಹಾಗೆ ಬಳಕೆ ಮಾಡಬಹುದು.

ಇಮ್ಯೂನ್ಮಾಡ್ಯುಲೇಟರ್ತುಳಸಿ ಎಲೆಗಳು ಇಮ್ಯೂನ್ ಮಾಡ್ಯೂಲೇಟರ್ ಆಗಿ ಕೆಲಸ ಮಾಡುವುದು. ಇದರಿಂದ ದೇಹದ ಪ್ರತಿರೋಧಕ ಶಕ್ತಿಯು ಸುಧಾರಣೆ ಆಗುವುದು ಮತ್ತು ನಿರ್ವಹಿಸುವುದು. ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಉಂಟು ಮಾಡುವ ಹಾನಿಕಾರಕ ರೋಗದ ವಿರುದ್ಧ ಇದು ಹೋರಾಡುವುದು ಮತ್ತು ಆರೋಗ್ಯಕಾರಿ ಪ್ರತಿರೋಧಕ ಅಂಗಾಂಶಗಳನ್ನು ಇದು ನಿರ್ಮಾಣ ಮಾಡುವುದು. ವಿಷಕಾರಿ
ಫ್ರೀ ರ್ಯಾಡಿಕಲ್ ನಿಂದ ಆರೋಗ್ಯಕಾರಿ ಅಂಗಾಂಶಗಳನ್ನು ಕಾಪಾಡಲು ತುಳಸಿ ಎಲೆಗಳಲ್ಲಿ ಇರುವ ಆಯಂಟಿಆಕ್ಸಿಡೆಂಟ್ ನೆರವಾಗುವುದು. ತುಳಸಿ ಎಲೆಗಳಲ್ಲಿ ಇರುವಂತಹ ಔಷಧೀಯ ಗುಣಗಳು ಸೋಂಕಿನಿಂದ ದೇಹವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಮಧುಮೇಹಮತ್ತುಕಿಡ್ನಿಕಲ್ಲಿನಸಮಸ್ಯೆತಗ್ಗಿಸುವುದುತುಳಸಿ ಎಲೆಗಳಲ್ಲಿ ಯುಜೆನಾಲ್, ಕ್ಯಾರಿಯೋಫಿಲೀನ್ ಮತ್ತು ಮೀಥೈಲ್ ಯುಜೆನಾಲ್ ಎನ್ನುವ ಸಾರಭೂತ ತೈಲವಿದೆ. ಈ ಅಂಶಗಳು ಮೇಧೋಜೀರಕ ಗ್ರಂಥಿಯ ಅಂಗಾಂಶಗಳು ಇನ್ಸುಲಿನ್ ಜಮೆ ಮಾಡಲು ಮತ್ತು ಬಿಡುಗಡೆಗೊಳಿಸಲು ನೆರವಾಗುವುದು. ಇನ್ಸುಲಿನ್ ಸೂಕ್ಷ್ಮತೆಯಿಂದಾಗಿ ದೇಹದಲ್ಲಿ ರಕ್ತದ ಸಕ್ಕರೆ ಮಟ್ಟವು ಕಡಿಮೆ ಆಗುವುದು ಮತ್ತು ಮಧುಮೇಹವನ್ನು ನಿವಾರಣೆ ಮಾಡುವುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಆಗ ಕಿಡ್ನಿ ಕಲ್ಲುಗಳು ಕೂಡ ನಿವಾರಣೆ ಆಗುವುದು. ಕಿಡ್ನಿಯಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ನಿರ್ಮಾಣವಾಗುವುದನ್ನು ತಡೆಯುವುದು.

ಹೃದಯವನ್ನುರಕ್ಷಿಸುವುದುತುಳಸಿ ಎಲೆಗಳಲ್ಲಿ ಇರುವಂತಹ ಯುಜೆನಾಲ್ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿಟ್ಟು ಹೃದಯವನ್ನು ರಕ್ಷಿಸುವುದು. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದು ಕಾಯಿಲೆಗಳಿಂದ ಹೃದಯವನ್ನು ರಕ್ಷಣೆ ಮಾಡುವುದು.

ಕ್ಯಾನ್ಸರ್ಅಪಾಯತಗ್ಗಿಸುವುದುತುಳಸಿ ಎಲೆಗಳಲ್ಲಿ ಕ್ಯಾನ್ಸರ್ ವಿರೋಧಿ ಮತ್ತು ಆಯಂಟಿಆಕ್ಸಿಡೆಂಟ್ ಗುಣಗಳು ಇವೆ. ಈ ಅಂಶಗಳು ಬಾಯಿ ಮತ್ತು ಸ್ತನ ಕ್ಯಾನ್ಸರ್ ಬೆಳವಣಿಗೆ ಆಗದಂತೆ ತಡೆಯುವುದು. ಗಡ್ಡೆಗಳಿಗೆ ರಕ್ತ ಸರಬರಾಜು ಆಗುವುದನ್ನು ರಕ್ತನಾಳಗಳಿಗೆ ಕಡಿಮೆ ರಕ್ತ ಪೂರೈಕೆ ಮಾಡುವ ಮೂಲಕ ತಡೆಯುವುದು.


Spread the love

By admin