Spread the love

ನಿತ್ಯದ ಅಡುಗೆಯಲ್ಲಿ ನಾವು ಟೊಮೆಟೋ ಬಳಸುತ್ತೇವೆ. ಪ್ರತಿದಿನ ಟೊಮೆಟೋ ತಿನ್ನೋದ್ರಿಂದ ಹಲವು ಪ್ರಯೋಜನಗಳಿವೆ. ಹೊಟ್ಟೆ ಕ್ಯಾನ್ಸರ್ ನಿಂದ್ಲೂ ನೀವು ಬಚಾವ್ ಆಗ್ಬಹುದು. ಟೊಮೆಟೋ ಮತ್ತು ಟೊಮೆಟೋ ರಸ ಉತ್ಪಾದಿಸುವ ಜೀವಕೋಶಗಳು, ಕ್ಲೋನಿಂಗ್ ಅನ್ನು ತಡೆಯುತ್ತವೆ.

ಅದರಿಂದಾಗಿ ಹೊಟ್ಟೆ ಕ್ಯಾನ್ಸರ್ ಬರುವುದಿಲ್ಲ.

ಟೊಮೆಟೋ, ಕ್ಯಾನ್ಸರ್ ಜೀವಕೋಶಗಳನ್ನು ಸಾಯಿಸಲು ನೆರವಾಗುತ್ತದೆ. ಸ್ಯಾನ್ ಮರ್ಜಾನೋ ಹಾಗೂ ಇತರ ಟೊಮೆಟೋಗಳಲ್ಲಿ ಈ ಶಕ್ತಿಯಿದೆ. ಕರುಳಿನ ಕ್ಯಾನ್ಸರ್ ಗೆ ಇದೊಂದು ಉತ್ತಮ ಮನೆ ಮದ್ದು. ಚಿಕಿತ್ಸೆ ವೇಳೆ ಟೊಮೆಟೋ ಪ್ಯೂರೆ ಬಳಸುವುದರಿಂದ ಕ್ಯಾನ್ಸರ್ ಜೀವಕೋಶಗಳ ಕಾರ್ಯಾಚರಣೆಯನ್ನು ತಡೆಯಬಹುದು.

ಜೊತೆಗೆ ಕ್ಯಾನ್ಸರ್ ಸೆಲ್ಸ್ ಟ್ರಾನ್ಸ್ ಫರ್ ಪ್ರಕ್ರಿಯೆ ಮೇಲೂ ಇದು ಪರಿಣಾಮ ಬೀರುವುದರಿಂದ, ಅವು ತಾನಾಗಿಯೇ ಸಾಯುತ್ತವೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಯ ಅಗತ್ಯವಿದೆ ಎನ್ನುತ್ತಾರೆ ವಿಜ್ಞಾನಿಗಳು. ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಥವಾ ಕರುಳಿನ ಕ್ಯಾನ್ಸರ್ ಈಗ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಕರುಳಿನ ಕ್ಯಾನ್ಸರ್ ಗೆ ಜೆನೆಟಿಕ್ಸ್, ನಾವು ಸೇವಿಸುವ ಆಹಾರ, ಹೆಲಿಕೋಬ್ಯಾಕ್ಟರ್ ಸೋಂಕು ಸೇರಿದಂತೆ ಹಲವು ಅಂಶಗಳು ಕಾರಣ. ಇದರ ಜೊತೆಜೊತೆಗೆ ಧೂಮಪಾನ ಮತ್ತು ಅತಿಯಾದ ಉಪ್ಪು ಸೇವನೆ ಕೂಡ ಕರುಳಿನ ಕ್ಯಾನ್ಸರ್ ಗೆ ಕಾರಣವಾಗುತ್ತದೆ.


Spread the love

By admin