Spread the love

ಬೆಳಗಾವಿ: ಪಡಿತರ ಅಕ್ಕಿ ಕಾಳಸಂತೆಕೋರರ ಪಾಲಾಗುವುದನ್ನು ತಡೆಯುವ ಉದ್ದೇಶದಿಂದ ಪ್ರತ್ಯೇಕ ಬಿಪಿಎಲ್ ಕಾರ್ಡ್ ವಿತರಿಸಲು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಪಡಿತರದ ಅಕ್ಕಿ ದುರ್ಬಳಕೆ ತಡೆಯಲು ಆಂಧ್ರಪ್ರದೇಶ ಮಾದರಿಯಲ್ಲಿ ಅಕ್ಕಿಗೆ ಪ್ರತ್ಯೇಕ ಬಿಪಿಎಲ್ ಕಾರ್ಡ್ ವಿತರಿಸಬೇಕೆಂಬ ಪ್ರಸ್ತಾವನೆ ಸಲ್ಲಿಸಲಾಗಿದೆ.

ವಿಧಾನಮಂಡಲಾದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವತಿಯಿಂದ ಸರ್ಕಾರಕ್ಕೆ ಮಹತ್ವದ ಪ್ರಸ್ತಾವನೆ ಸಲ್ಲಿಸಲಾಗಿದೆ.

ಅನಾರೋಗ್ಯದ ಕಾರಣ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವವರ ಸಂಖ್ಯೆ ಜಾಸ್ತಿ ಆಗಿದೆ. ಉಚಿತವಾಗಿ ಪಡೆದ ಅಕ್ಕಿ ದುರ್ಬಳಕೆ ಆಗುತ್ತಿದ್ದು, ಇದನ್ನು ತಡೆಯಲು ಆಂಧ್ರದ ಮಾದರಿಯಲ್ಲಿ ಅಕ್ಕಿಗೆ ಪ್ರತ್ಯೇಕ ಬಿಪಿಎಲ್ ಕಾರ್ಡ್ ಅಥವಾ ಮೆಡಿಕಲ್ ಬಿಪಿಎಲ್ ಕಾರ್ಡ್ ನೀಡಿ ದುರ್ಬಳಕೆ ತಡೆಯಬೇಕೆಂಬ ಸಲಹೆ ಕೇಳಿ ಬಂದಿದೆ. ಸರ್ಕಾರ ಮತ್ತು ಸಾರ್ವಜನಿಕರ ಮೇಲೆ ಅಕ್ಕಿ ದುರ್ಬಳಕೆಯಿಂದ ಹೊರೆಯಾಗುತ್ತದೆ. ಅಪರಾಧಿಗಳನ್ನು ಹಿಡಿಯುವವರು ಮತ್ತು ಎಫ್‌ಐಆರ್ ದಾಖಲಿಸುವವರು ಬೇರೆಯಾಗಿದ್ದು, ಬಯೋಮೆಟ್ರಿಕ್ ಇದ್ದರೂ ಪಾರದರ್ಶಕತೆ ಇಲ್ಲವಾಗಿದೆ. ರಈ ಕಾರಣದಿಂದ ಹೊಸ ರೂಪದಲ್ಲಿ ಪಡಿತರ ಅಕ್ಕಿ ವಿತರಿಸಿದರೆ ಕಾರ್ಯಕ್ರಮ ಸಾರ್ಥಕವಾಗಿ ಅರ್ಹ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.


Spread the love

By admin