Spread the love

ಹಾವೇರಿ: ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹುಣಸಿಕಟ್ಟಿ ಕ್ರಾಸ್ ಬಳಿ ಬಸ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ದಂಪತಿ ಮೃತಪಟ್ಟಿದ್ದಾರೆ.

ಕೇರಳ ಮೂಲದ ದಂಪತಿ ಮೊಹಮ್ಮದ್(68), ಆಯಿಷಾ(60) ಮೃತಪಟ್ಟವರು. ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಾರ್ ನಲ್ಲಿದ್ದ ಉಳಿದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


Spread the love

By admin