Spread the love

ಚಂಡೀಗಢ: ಪಂಜಾಬ್‌ ಮುಖ್ಯಮಂತ್ರಿ ಭಗವಂತ ಸಿಂಗ್‌ ಮಾನ್‌ ಅವರ ನಿವಾಸದ ಬಳಿ  ಬಾಂಬ್‌ ಪತ್ತೆಯಾಗಿದೆ. ಮಾನ್‌ ಮನೆ ಹಾಗೂ ಬಳಕೆ ಮಾಡುತ್ತಿದ್ದ ಹೆಲಿಪ್ಯಾಡ್‌ನಿಂದ ಸ್ವಲ್ಪ ದೂರದಲ್ಲೇ ಸ್ಪೋಟಕ ಕಂಡುಬಂದಿದೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ದಳ ಬಾಂಬ್‌ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ. ಮುಖ್ಯಮಂತ್ರಿ ಮಾನ್‌ ಅವರ ನಿವಾಸದ ಬಳಿ ಮಾವಿನ ಮರದ ಕೆಳಗೆ ವಸ್ತುವೊಂದು ನಿನ್ನೆ ಸಾಯಂಕಾಲ 4.30ರ ಸುಮಾರಿಗೆ ಪತ್ತೆಯಾಗಿದೆ ಎಂಬ ಮಾಹಿತಿ ಸಿಕ್ಕ ಬೆನ್ನಲ್ಲೇ ಬಾಂಬ್‌ ನಿಷ್ಕ್ರಿಯ ದಳ ಕಾರ್ಯಾಚರಣೆ ನಡೆಸಿತು. ಇದೊಂದು ಸಕ್ರಿಯ ಬಾಂಬ್‌ ಶೆಲ್‌ ಆಗಿದ್ದು, ಇದನ್ನು ನಿಷ್ಕ್ರಿಯಗೊಳಿಸಲಾಗಿದೆ.

ಇದು ಮುಖ್ಯಮಂತ್ರಿ ನಿವಾಸದ ಬಳಿ ಹೇಗೆ ತಲುಪಿತು ಎಂಬುದರ ಕುರಿತಾಗಿ ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ‘ಬಾಂಬ್‌ ನಿಷ್ಕ್ರಿಯ ದಳದ ಸಹಾಯದಿಂದ ಇಡೀ ಪ್ರದೇಶವನ್ನು ಬಂದೋಬಸ್ತ್ ಮಾಡಿದ್ದೇವೆ. ಭಾರತೀಯ ಸೇನೆ ಆಗಮಿಸಿದ್ದು, ತನಿಖೆ ಮುಂದುವರೆದಿದೆ ಎಂದು ಚಂಡೀಗಢ ಆಡಳಿತದ ನೋಡಲ್‌ ಅಧಿಕಾರಿ ತಿಳಿಸಿದ್ದಾರೆ. ಬಾಂಬ್‌ ಪತ್ತೆಯಾದ ವೇಳೆಯಲ್ಲಿ ಮುಖ್ಯಮಂತ್ರಿ ಮಾನ್‌ ಮನೆಯಲ್ಲಿರಲಿಲ್ಲ. ಅವರ ಮನೆಯ ಸಮೀಪವೇ ಹರ್ಯಾಣ ಸಿಎಂ ಮನೆಯೂ ಇದೆ. ಈ ಬಾಂಬ್‌ ಎಲ್ಲಿಂದ ಬಂದಿದ್ದು ಎಂಬುದನ್ನು ಸೇನೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಗುಜರಿ ಅಂಗಡಿಯವರನ್ನೂ ವಿಚಾರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

By admin