Spread the love

ಬೀಜಿಂಗ್: ಕೋವಿಡ್‌ ಬಿಕ್ಕಟ್ಟಿನಿಂದಾಗಿ ಚೀನಾ ಕಠಿಣ ಸವಾಲುಗಳನ್ನು ಎದುರಿಸುತ್ತಿದೆ ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್ ತಿಳಿಸಿದ್ದಾರೆ. ತಮ್ಮ ಹೊಸ ವರ್ಷದ ಭಾಷಣದಲ್ಲಿ ಜಿಗ್ ಪಿಂಗ್ ಈ ವಿಷಯ ಹೇಳಿದ್ದಾರೆ.

‘ರಾಷ್ಟ್ರದಲ್ಲಿ ಕೋವಿಡ್‌ ಮತ್ತೊಂದು ಹಂತಕ್ಕೆ ಪ್ರವೇಶಿಸಿದ್ದು, ಕಠಿಣ ಸವಾಲುಗಳನ್ನು ಅಸಾಧಾರಣ ಪ್ರಯತ್ನಗಳ ಮೂಲಕ ಚೀನಾ ಮೇಲುಗೈ ಸಾಧಿಸಲಿದೆ’ ಎಂದು ಜಿನ್‌ಪಿಂಗ್ ತಿಳಿಸಿದ್ದಾರೆ.

ಆಧುನಿಕ ಸಮಾಜವಾದಿ ದೇಶವಾದ ಚೀನಾವನ್ನು ಎಲ್ಲಾ ರಂಗಗಳಲ್ಲೂ ಮತ್ತಷ್ಟು ಅಭಿವೃದ್ಧಿಗೊಳಿಸಲು ಮತ್ತು ಪುನರುಜ್ಜೀವನಗೊಳಿಸಲು ಮಹತ್ವಾಕಾಂಕ್ಷೆಯ ನೀಲನಕ್ಷೆಯನ್ನು ರಚಿಸಲಾಗಿದೆ. ಹೊಸ ಮಾರ್ಗಗಳನ್ನು ಅನುಸರಿಸಿಕೊಂಡು ಒಂದಾಗಿ ಸಾಗೋಣ ಎಂದು ಜಿನ್‌ಪಿಂಗ್ ಕರೆ ನೀಡಿದ್ದಾರೆ.

ಚೀನಾ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ. ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ. ಜಾಗತಿಕ ಆಹಾರ ಬಿಕ್ಕಟ್ಟಿನ ಹೊರತಾಗಿಯೂ, ಆಹಾರ ಪದಾರ್ಥಗಳ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಸತತ 19 ವರ್ಷಗಳಿಂದ ಚೀನಾ ಮೇಲುಗೈ ಸಾಧಿಸಿದೆ ಎಂದು ತಿಳಿಸಿದ್ದಾರೆ.

ಕನಸುಗಳು ನನಸಾಗುವ ದೇಶಗಳಲ್ಲಿ ಚೀನಾ ಒಂದಾಗಿದೆ. ಬೀಜಿಂಗ್ ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌ ಸೇರಿದಂತೆ ಚಳಿಗಾಲದ ಕ್ರೀಡಾಕೂಟಗಳು ಯಶಸ್ಸಿಯಾಗಿ ಮುಕ್ತಾಯಗೊಂಡವು. ಈ ಕ್ರೀಡಾಕೂಟಗಳಲ್ಲೂ ನಮ್ಮ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರಿದ್ದಾರೆ ಎಂದು ಷಿ ಸ್ಮರಿಸಿದ್ದಾರೆ.


Spread the love

By admin