Spread the love

ವದೆಹಲಿ: ಹೊಸ ವರ್ಷದ ದಿನದಂದೇ ದೆಹಲಿಯಲ್ಲಿ ನಡೆದ ಯುವತಿಯ ಭೀಕರ ಹತ್ಯೆ ಪ್ರಕರಣದಲ್ಲಿ ಸಿಕ್ಕ ಐವರು ಆರೋಪಿಗಳಲ್ಲಿ ಒಬ್ಬರು ಬಿಜೆಪಿ ಸದಸ್ಯ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಸುಲ್ತಾನ್‌ಪುರಿಯಲ್ಲಿ ಯುವತಿ ಅಂಜಲಿ ಚಲಿಸುತ್ತಿದ್ದ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದು ಸುಮಾರು 12 ಕಿಮೀ ಎಳೆದೊಯ್ದು ಆಕೆ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಮಾತನಾಡಿದ್ದಾರೆ.

 

ಪ್ರಕರಣದಲ್ಲಿ ಬಂಧಿರಾಗಿರುವ ಐವರು ಆರೋಪಿಗಳಲ್ಲಿ ಒಬ್ಬರಾದ ಮನೋಜ್ ಮಿತ್ತಲ್ ಬಿಜೆಪಿ ಸದಸ್ಯನಾಗಿದ್ದಾನೆ. ಆದ್ರೆ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಹಾಗೂ ಪೊಲೀಸ್ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಈ ಮಾಹಿತಿಯನ್ನ ಮರೆಮಾಚಿದ್ದಾರೆ. ಪೊಲೀಸ್ ಠಾಣೆಯ ಪಕ್ಕದಲ್ಲೇ ಇರುವ ಭಾವಚಿತ್ರದ ಬೋರ್ಡಿಂಗ್ ಸಹ ಮಿತ್ತಲ್ ಬಿಜೆಪಿ ಸದಸ್ಯ ಎಂಬುದನ್ನ ಸ್ಪಷ್ಟಪಡಿಸುತ್ತದೆ ಎಂದು ಹೇಳಿದ್ದಾರೆ.

ಕಾರಿನಲ್ಲಿ ಸಿಕ್ಕಿಕೊಂಡಿದ್ದ ಮಹಿಳೆಯನ್ನು ಬೀದಿಯಲ್ಲಿ ಎಳೆದೊಯ್ಯುತ್ತಿರುವ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು 22 ಬಾರಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೂ ಪೊಲೀಸರು ಆರೋಪಿಯನ್ನ ರೆಡ್‌ಹ್ಯಾಂಡಾಗಿ ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ, ಅವರು ತಮ್ಮ ಕಾರು ಅಪಘಾತಕ್ಕೀಡಾಗಿದೆ ಎಂದು ಆರೋಪಿಗಳು ಹೇಳಿದ್ದರು. ಆದ್ರೆ ಮಹಿಳೆಯನ್ನು ಎಳೆದೊಯ್ದಿರುವುದು ತಿಳಿದಿರಲಿಲ್ಲವೆಂಬುದಾಗಿ ಹೇಳಿದ್ದಾರೆ.


Spread the love

By admin