Spread the love

ಠ್ಮಂಡು: ನೇಪಾಳದಲ್ಲಿ ವಿಮಾನ ಪತನ ಪ್ರಕರಣದಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ನೇಪಾಳದ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 72 ಜನರಿದ್ದ ಯೇಟಿ ಏರ್ ಲೈನ್ಸ್ ವಿಮಾನವು ಪತನಗೊಂಡು, ರನ್‌ವೇಯಲ್ಲಿಯೇ ಹೊತ್ತಿ ಉರಿದಿದೆ.

ಪೋಖರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಈ ದುರಂತ ಸಂಭವಿಸಿದೆ.

ವಿಮಾನದಲ್ಲಿ ನಾಲ್ವರು ಸಿಬ್ಬಂದಿಗಳು, 10 ವಿದೇಶಿ ಪ್ರಯಾಣಿಕರು ಸೇರಿದಂತೆ 68 ಪ್ರಯಾಣಿಕರು ಇದ್ದರು. ಒಟ್ಟು 72 ಜನರು ವಿಮಾನದಲ್ಲಿದ್ದರು. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸ್ತುತ ಪೋಖರಾ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಬಂದ್ ಮಾಡಲಾಗಿದೆ.


Spread the love

By admin