Spread the love

ಬೆಂಗಳೂರು: ಕರ್ತವ್ಯನಿರತ ಸಿಪಿಐ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಾಜಿ ಕಾರ್ಪೊರೇಟರ್ ವಿ. ಬಾಲಕೃಷ್ಣ ಅವರನ್ನು ಬಂಧಿಸಲಾಗಿದೆ.

ಕಗ್ಗಲೀಪುರ ಠಾಣೆ ಪೊಲೀಸರು ವಿ. ಬಾಲಕೃಷ್ಣ ಅವರನ್ನು ಬಂಧಿಸಿದ್ದಾರೆ. ಎಲೆಚೇನಹಳ್ಳಿ ವಾರ್ಡ್ ನಂಬರ್ 185 ರ ಮಾಜಿ ಕಾರ್ಪೊರೇಟರ್ ಬಾಲಕೃಷ್ಣ ಮತ್ತು ಸಿಪಿಐ ವಿಜಯ್ ಕುಮಾರ್ ನಡುವೆ ವಾಗ್ವಾದ ನಡೆದಿತ್ತು.

ಈ ವೇಳೆ ಸಿಪಿಐ ಕತ್ತಿನ ಪಟ್ಟಿ ಹಿಡಿದು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ತಕ್ಷಣವೇ ಕಗ್ಗಲೀಪುರ ಠಾಣೆ ಪೊಲೀಸರು ಬಾಲಕೃಷ್ಣನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಪಿಐ ವಿಜಯಕುಮಾರ್ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.


Spread the love

By admin