Spread the love

ವದೆಹಲಿ: ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಬುಧವಾರ ನಾಗರಿಕ ವಿಮಾನಯಾನ ಅಗತ್ಯತೆ(ಸಿಎಆರ್) ನಿಯಮಗಳಿಗೆ ತಿದ್ದುಪಡಿ ತಂದಿದ್ದು, ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ.

DGCA ಬಿಡುಗಡೆ ಮಾಡಿದ ತಿದ್ದುಪಡಿ ಮಾಡಲಾದ CAR ನಲ್ಲಿ, ವಿಳಂಬ, ರದ್ದತಿ ಮತ್ತು ಫ್ಲೈಯಿಂಗ್ ಕ್ಲಾಸ್ ಅನೈಚ್ಛಿಕವಾಗಿ ಡೌನ್‌ಗ್ರೇಡ್ ಮಾಡುವಿಕೆಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಮರುಪಾವತಿ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗುತ್ತದೆ.

 

ತಿದ್ದುಪಡಿ ಮಾಡಲಾದ ಸಿಎಆರ್‌ ಪ್ರಕಾರ, ಕೆಳದರ್ಜೆಗೆ ಇಳಿಸಲ್ಪಟ್ಟ ಮತ್ತು ಅವರು ಪಾವತಿಸಿದ ದರಕ್ಕಿಂತ ಕಡಿಮೆ ತರಗತಿಯಲ್ಲಿ ಸಾಗಿಸುವ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳಿಂದ ಮರು ಪಾವತಿಸಲು ಅನುವು ಮಾಡಿಕೊಡುತ್ತದೆ.

ದೇಶೀಯ ಪ್ರಯಾಣಿಕರಿಗೆ, ತೆರಿಗೆ ಸೇರಿದಂತೆ ಟಿಕೆಟ್‌ ನ ಶೇಕಡ 75 ರಷ್ಟು ಹಣವನ್ನು ಪರಿಷ್ಕೃತ ಸಿಎಆರ್ ಅಡಿಯಲ್ಲಿ ವಿಮಾನಯಾನ ಸಂಸ್ಥೆಯು ಮರುಪಾವತಿಸಬೇಕಾಗುತ್ತದೆ. ಅಂತರಾಷ್ಟ್ರೀಯ ವಲಯಕ್ಕೆ ಮರುಪಾವತಿ ನಿಯಮಗಳು ಸಂಪರ್ಕಗೊಂಡಿರುವ ಸ್ಥಳಗಳ ನಡುವಿನ ಅಂತರವನ್ನು ಅವಲಂಬಿಸಿರುತ್ತದೆ.

ಅಂತರಾಷ್ಟ್ರೀಯ ವಲಯಕ್ಕೆ 1500 ಕಿಮೀ ಅಥವಾ ಅದಕ್ಕಿಂತ ಕಡಿಮೆ ದೂರದ ವಿಮಾನಗಳಿಗೆ ತೆರಿಗೆ ಸೇರಿದಂತೆ ಟಿಕೆಟ್‌ನ ವೆಚ್ಚದ ಶೇಕಡ 30 ರಷ್ಟು, 1500 ಕಿಮೀ ನಿಂದ 3500 ಕಿಮೀ ನಡುವಿನ ವಿಮಾನಗಳಿಗೆ ತೆರಿಗೆ ಸೇರಿದಂತೆ ಟಿಕೆಟ್‌ನ ವೆಚ್ಚದ ಶೇಕಡ 50 ರಷ್ಟು, 3500 ಕಿಲೋಮೀಟರ್‌ ಗಿಂತ ಹೆಚ್ಚಿನ ವಿಮಾನಗಳಿಗೆ ತೆರಿಗೆ ಸೇರಿದಂತೆ ಟಿಕೆಟ್‌ನ ವೆಚ್ಚದ 75 ಪ್ರತಿಶತ ಇರಲಿದೆ ಎಂದು ಹೇಳಲಾಗಿದೆ.


Spread the love

By admin