ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರನೊಬ್ಬ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಪಾರ್ಟಿಯಲ್ಲಿ ಆಟಗಾರ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.
ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕಟ್ಟುನಿಟ್ಟಿನ ನೀತಿ ಸಂಹಿತೆಯನ್ನು ಹೊರಡಿಸಲಾಗಿದೆ. ಆಟಗಾರರು ವೈಯಕ್ತಿಕ ಭೇಟಿಗಾಗಿ ಹೋಟೆಲ್ ನಿಂದ ಹೊರಗೆ ಹೋಗಕೂಡದು. ಹೊರಗೆ ಹೋಗುವ ಅನಿವಾರ್ಯತೆ ಇದ್ದಲ್ಲಿ ಫ್ರಾಂಚೈಸಿ ಅಧಿಕಾರಿಗೆ ತಿಳಿಸಬೇಕು. ನಿಯಮ ಉಲ್ಲಂಘಿಸುವ ಆಟಗಾರರಿಗೆ ದಂಡ ವಿಧಿಸಲಾಗುವುದು. ಅವರ ಐಪಿಎಲ್ ಒಪ್ಪಂದವನ್ನು ಕೂಡ ರದ್ದು ಮಾಡಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಫ್ರಾಂಚೈಸಿ ಪಾರ್ಟಿಯಲ್ಲಿ ಮಹಿಳೆಯೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಅನುಚಿತವಾಗಿ ವರ್ತಿಸಿದ್ದು, ಈ ಬೆಳವಣಿಗೆ ನಂತರ ತಂಡದಿಂದ ಕಟ್ಟುನಿಟ್ಟಿನ ನೀತಿ ಸಂಹಿತೆ ಹೊರಡಿಸಲಾಗಿದೆ.