ನೀವು ಪದವಿ ಪಡೆದಿದ್ದರೆ ಎಷ್ಟು ವರ್ಷದಲ್ಲಿ ಪೂರೈಸಿರುವಿರಿ. ಸಾಮಾನ್ಯವಾಗಿ ಕೇವಲ ಮೂರು ವರ್ಷದಲ್ಲೇ ಪದವಿ ಪೂರೈಸಬಹುದು. ಯಾವುದಾದರೂ ವಿಷಯದಲ್ಲಿ ಅನುತ್ತೀರ್ಣರಾಗಿದ್ದರೆ ಅದನ್ನು ಪಾಸ್ ಮಾಡಲು ಮತ್ತೆ ಒಂದೆರಡು ವರ್ಷಗಳನ್ನು ತೆಗೆದುಕೊಳ್ಳಬಹುದು ಅಲ್ವಾ? ಆದರೆ, ಇಲ್ಲೊಬ್ಬ ವ್ಯಕ್ತಿ ತಾವು ಪದವಿ ಪ್ರಾರಂಭಿಸಿದ ಐದು ದಶಕಗಳ ನಂತರ ತಮ್ಮ ಡಿಗ್ರಿಯನ್ನು ಪೂರ್ಣಗೊಳಿಸಿದ್ದಾರೆ.
ಹೌದು, ಆರ್ಥರ್ ರಾಸ್ ಎಂಬುವವರು ತಮ್ಮ ವಿಶ್ವವಿದ್ಯಾನಿಲಯ ಪದವಿಯನ್ನು ಪ್ರಾರಂಭಿಸಿದ ಐದು ದಶಕಗಳ ನಂತರ ಮೇ 25 ರ ಗುರುವಾರದಂದು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅಂತಿಮವಾಗಿ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪೂರ್ಣಗೊಳಿಸಿದರು. ಆರ್ಥರ್ ರಾಸ್ ಅವರಿಗೀಗ 71 ವರ್ಷ ವಯಸ್ಸಾಗಿದೆ. ಪದವಿ ಪಡೆಯಲು 54 ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ ವಿಶ್ವವಿದ್ಯಾನಿಲಯ ಪದವಿಯನ್ನು ಪೂರ್ಣಗೊಳಿಸಿದ ದೀರ್ಘಾವಧಿಯ ಹೊಸ ದಾಖಲೆಯನ್ನು ಅವರು ಹೊಂದಿದ್ದಾರೆ.
ಅಂದಹಾಗೆ, ರಾಸ್ 1969 ರಲ್ಲಿ ಯುಬಿಸಿಗೆ ಸೇರಿಕೊಂಡರು. ನನಗೆ ಕುತೂಹಲವಿದ್ದ ಕಾರಣ ನಾನು ಕಲಿಯಲು ಬಯಸಿದ್ದೆ. ಕಲಿಯುವ ಬಯಕೆಯೇ, ಇಷ್ಟು ವರ್ಷಗಳ ನಂತರ ತನ್ನ ಪದವಿಯನ್ನು ಮುಗಿಸಲು ಪ್ರೇರೇಪಿಸಿತು ಎಂದು ಅವರು ಹೇಳಿದ್ದಾರೆ.