Spread the love

2021 ರ ಹೊಸ ಐಟಿ ನಿಯಮಗಳ ಅನುಸಾರ ಮೆಟಾ ಒಡೆತನದ ವಾಟ್ಸ್ ಆಪ್ ಆಗಸ್ಟ್ ತಿಂಗಳಲ್ಲಿ 65 ಲಕ್ಷ  ಅನಗತ್ಯ ಖಾತೆಗಳನ್ನು ನಿಷೇಧಿಸಿದೆ.

ಸ್ವತಃ ವಾಟ್ಸ್ ಆಪ್ ಈ ಬಗ್ಗೆ ಮಾಹಿತಿ ನೀಡಿದ್ದು,  ಆಗಸ್ಟ್‌ ತಿಂಗಳಲ್ಲಿ ನಿಷೇಧಗೊಂಡಿರುವ ವಾಟ್ಸ್ ಆಪ್ ಖಾತೆಗಳ ಪೈಕಿ 2,420,700 ಖಾತೆಗಳನ್ನು ಗ್ರಾಹಕರಿಂದ ವರದಿಯಾಗುವುದಕ್ಕೂ ಮುನ್ನ ಸ್ವಯಂ ಪ್ರೇರಿತವಾಗಿ ನಿರ್ಬಂಧಿಸಲಾಗಿದೆ.

ಜುಲೈ ತಿಂಗಳಿನಲ್ಲಿ ವಾಟ್ಸ್ ಆಪ್ ಭಾರತದಲ್ಲಿ 500 ಮಿಲಿಯನ್ ಗ್ರಾಹಕರನ್ನು ಹೊಂದಿತ್ತು.  ಈ ವರೆಗೂ 74 ಲಕ್ಷ ಅನಗತ್ಯ ಖಾತೆಗಳನ್ನು ನಿಷೇಧಿಸಲಾಗಿದೆ.

ಆಗಸ್ಟ್ ತಿಂಗಳಲ್ಲಿ 3,912 ಕುಂದುಕೊರತೆ ವರದಿಗಳು, ನಿಷೇಧ ಮನವಿಗಳು ಬಂದಿದ್ದು, ಈ ಪೈಕಿ 297 ಅರ್ಜಿಗಳ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ವಾಟ್ಸ್ ಆಪ್ ಹೇಳಿದೆ.


Spread the love