ಕೊಲಂಬೊ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಜಿದ್ದಾಜಿದ್ದಿನ ಏಷ್ಯಾಕಪ್ ಸೂಪರ್-4 (Asia Cup Super Four) ಇಂಡೋ ಪಾಕ್ ಕನದಕ್ಕೆ ಮಳೆ ಅಡ್ಡಿಯಾಗಿದ್ದು ಸೋಮವಾರ ಪಂದ್ಯ ನಡೆಯಲಿದೆ.
ಮೊದಲ ವಿಕೆಟ್‌ಗೆ ರೋಹಿತ್ ಮತ್ತು ಗಿಲ್ ಜೋಡಿ 16.4 ಓವರ್‌ಗಳಲ್ಲಿ 121 ರನ್ ಬಾರಿಸಿತ್ತು. ರೋಹಿತ್ ಶರ್ಮಾ 49 ಎಸೆತಗಳಲ್ಲಿ 56 ರನ್ (6 ಬೌಂಡರಿ, 4 ಸಿಕ್ಸರ್) ಚಚ್ಚಿ ಔಟಾಗುತ್ತಿದ್ದಂತೆ, 52 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 58 ರನ್ ಗಳಿಸಿದ್ದ ಶುಭಮನ್ ಗಿಲ್ ಸಹ ವಿಕೆಟ್ ಕೈಚೆಲ್ಲಿದರು
ಆ ನಂತರ ಕಣಕ್ಕಿಳಿದ ಕೆ.ಎಲ್ ರಾಹುಲ್ (KL Rahul) ಹಾಗೂ ವಿರಾಟ್ ಕೊಹ್ಲಿ ಸಹ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದರು. 24.1 ಓವರ್‌ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ಈ ವೇಳೆ ಭಾರೀ ಮಳೆ ಸುರಿದಿದೆ. ವಿರಾಟ್ ಕೊಹ್ಲಿ 8 ರನ್ ಮತ್ತು ಕೆ.ಎಲ್ ರಾಹುಲ್ 17 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಭಾರೀ ಮಳೆಯಿಂದ ಪಂದ್ಯವನ್ನು ರದ್ದು ಮಾಡಿದ್ದು, ಎಲ್ಲಿ ಆಟ ನಿಂತಿದೆಯೋ ಅಲ್ಲಿಂದಲೇ ಪಂದ್ಯ ನಡೆಯಲಿದೆ.
ಕಳೆದ ವಾರ ಗ್ರೂಪ್ ಹಂತದಲ್ಲು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿ ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು.