ಏಷ್ಯಾ ಕಪ್ 2023 ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್ಗೆ ದಾಪುಗಾಲಿಟ್ಟಿದೆ. ಮಳೆ ಅಬ್ಬರದ ಕಾರಣ ಆಟಕ್ಕೆ ಅಡಚಣೆ ಎದುರಾದರೂ ಸತತ ಮೂರು ದಿನ ಕಣಕ್ಕಿಳಿದು ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನು ಬಗ್ಗುಬಡಿಯುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಅದರಲ್ಲೂ ಆತಿಥೇಯ ಶ್ರೀಲಂಕಾ ಎದುರು 214 ರನ್ಗಳ ಗುರಿ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿ 41 ರನ್ಗಳ ಜಯ ದಾಖಲಿಸಿತು.
ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾಗಳಲ್ಲಿ ಕೆಲ ತಿಳಿಗೇಡಿಗಳು ಟೀಮ್ ಇಂಡಿಯಾ ಪಂದ್ಯಗಳನ್ನು ಫಿಕ್ಸ್ ಮಾಡಿದೆ ಎಂಬ ಗಂಭೀರ ಆರೋಪ ಹೊರಿಸಿದ್ದಾರೆ .ಇದರ ವಿರುದ್ಧದ ಸಿಡಿದೆದ್ದ ಪಾಕ್ ತಂಡದೆ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ನೀವೆಲ್ಲಾ ಏನು ಮಾಡುತ್ತಿದ್ದೀರಾ ಎಂಬುದು ನನಗೆ ಗೊತ್ತಿಲ್ಲ. ನನಗಿಲ್ಲ ಭಾರತ ತಂಡ ಪಂದ್ಯಗಳನ್ನು ಫಿಕ್ಸ್ ಮಾಡಿದ ಎಂಬ ಮೀಮ್ಗಳು ಮತ್ತು ಸಂದೇಶಗಳು ಸಿಗುತ್ತಿವೆ. ಪಾಕಿಸ್ತಾನ ತಂಡವನ್ನು ಸ್ಪರ್ಧೆಯಿಂದ ಹೊರಬೀಳುವಂತೆ ಮಾಡಲು ಬೇಕಂತಲೇ ಪಂದ್ಯ ಸೋಲುತ್ತಿದೆ. ಎಂದೆಲ್ಲಾ ಮಾತನಾಡುತ್ತಿದ್ದೀರಿ? ನಿಮ್ಮ ತಲೆ ಸರಿಯಿದೆಯೇ? ಇಲ್ಲಿ ಶ್ರೀಲಂಕಾ ತಂಡ ತನ್ನ ಸರ್ವವನ್ನೂ ಪಣಕ್ಕಿಟ್ಟು ಬೌಲಿಂಗ್ ಮಾಡಿದೆ. ಅಸಲಂಕಾ ಮತ್ತು ವೆಲ್ಲಾಳಗೆ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. 20 ವರ್ಷದ ಯುವ ಆಟಗಾರ 43 ರನ್ ಸಿಡಿಸಿ, 5 ವಿಕೆಟ್ ಪಡೆದಿದ್ದಾನೆ. ಭಾರತ ತಂಡ ಬೇಕೆಂದೆ ಈ ಪಂದ್ಯ ಸಳುತ್ತಿದೆ ಎಂದು ನನಗೆ ಭಾರತದಿಂದಲೇ ಫೋನ್ ಕರೆಗಳು ಬರುತ್ತಿವೆ,” ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.