Spread the love

ಹಾಸನ: ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿಗೆ ಯಾವುದೇ ಸಮಸ್ಯೆ ಇಲ್ಲಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಈ ವಿಚಾರವಾಗಿ ಸದ್ಯದಲ್ಲೇ ಹೊಸದಿಲ್ಲಿಗೆ ಹೋಗುತ್ತೇವೆ. ಮೈತ್ರಿಯ ಒಡಂಬಡಿಕೆ ವಿಶ್ವಾಸದಲ್ಲಿ ಚರ್ಚೆಯಾಗಿದೆ? ಎಷ್ಟು ಸೀಟು ಬೇಕು ಎಂದು ಚರ್ಚೆ ಆಗಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಹಿತಕ್ಕಾಗಿ ಮೈತ್ರಿಯೇ ಹೊರತು ಅಧಿಕಾರಕ್ಕಾಗಿ ಅಲ್ಲ. `ನಾನು ಪ್ರಧಾನಿಯಾಗಲು ಮೈತ್ರಿ ಅಲ್ಲ’ ಎಂದು ದೇವೇಗೌಡರು ಹೇಳಿಲ್ಲವೇ ಎಂದು ಪ್ರಶ್ನಿಸಿದರು. ಜೆಡಿಎಸ್‌ಗೆ ಎಷ್ಟುಸ್ಥಾನ ಎಂಬುದು ಮುಖ್ಯವಲ್ಲ ಮೈತ್ರಿಯ ಸಂಬಂಧ ಅಧಿಕಾರ, ಹಣದ ಮದದಲ್ಲಿ 28ಕ್ಕೆ 28 ಸ್ಥಾನ ಎನ್ನುತ್ತಿದ್ದಾರಲ್ಲ? ಅದರ ವಿರುದ್ಧದ ಹೋರಾಟವಿದು. ಇಂದಿನ ಕಾಂಗ್ರೆಸ್ ಸರಕಾರ ರಾಜ್ಯಕ್ಕೆ ಮಾರಕ. ಒಂದುಕಡೆ ಲೂಟಿ ಹೊಡೆಯುತ್ತಿದ್ದಾರೆ. ಇನ್ನೊಂದು ಕಡೆ ಕಾವೇರಿ ಸಮಸ್ಯೆ ಇದೆಲ್ಲವನ್ನು ಸರಿ ಮಾಡಬೇಕು ಎಂದರು.

ನಮ್ಮಮುಂದೆ ಇರುವುದು 28ಕ್ಕೆ 28 ಗೆಲ್ಲಬೇಕು. ನೀರಾವರಿ ಸಮಸ್ಯೆ ಬಗೆಹರಿಸಬೇಕು ಎಂಬುದು ನಮ್ಮ ಉದ್ದೇಶ ಎಂದರು. ಇತ್ತೀಚೆಗೆ ಎತ್ತಿನಹೊಳೆ ಕಾಮಗಾರಿ ವೀಕ್ಷಣೆಗೆ ಬಂದಿದ್ದರೋ? ಕಾಫಿತೋಟ ವೀಕ್ಷಣೆಗೆ ಬಂದಿದ್ದರೋ ಮಹಾನುಭಾವ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಕುಟುಕಿದರು. ನಾವು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ. ಜೆಡಿಎಸ್ ಕೊಟ್ಟ ಕೊಡುಗೆ ಏನು ಎಂಬುದು ಅರ್ಥಮಾಡಿಕೊಳ್ಳದೆ ಕೊಂಕು ಮಾತನಾಡುವುದು ನಿಲ್ಲಿಸಿ. 20 ತಿಂಗಳ ಆಡಳಿತವನ್ನು ಜನ ಇಂದಿಗೂ ಸ್ಮರಿಸುತ್ತಾರೆ ಎಂದು ಹೇಳಿದರು.


Spread the love