Spread the love

ಹನೋಯಿ: ವಿಯೆಟ್ನಾಂ ರಾಜಧಾನಿ ಹನೋಯಿ ನಗರದಲ್ಲಿ ಭಾರೀ ಅಗ್ನಿ ದುರಂತಕ್ಕೆ 56 ಜನ ಬಲಿಯಾಗಿದ್ದು, 50ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಹನೋಯಿ ನಗರದ 9 ಅಂತಸ್ತಿನ ಅಪಾರ್ಟ್ ​ಮೆಂಟ್ ​​ನಲ್ಲಿ ಈ ಅಗ್ನಿ ದುರಂತ ಸಂಭವಿಸಿದೆ. ಬೆಂಕಿ ಪ್ರಮಾದದಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹನೋಯಿ ಪೊಲೀಸ್ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಚಿಕ್ಕ ಮಗುವನ್ನು ಎತ್ತರದ ಮಹಡಿಯಿಂದ ಎಸೆಯಲಾಗಿದೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ವಿಯೆಟ್ನಾಂ ಇತ್ತೀಚಿನ ವರ್ಷಗಳಲ್ಲಿ ಹಲವಾರು ಮಾರಣಾಂತಿಕ ಬೆಂಕಿಯನ್ನು ಅನುಭವಿಸಿದೆ. ಅದರಲ್ಲೂ ಆಗಾಗ್ಗೆ ಜನಪ್ರಿಯ ಕರೋಕೆ ಬಾರ್‌ಗಳಂತಹ ಮನರಂಜನಾ ಸ್ಥಳಗಳಲ್ಲಿ ಇಂತಹ ದುರಂತಗಳು ಘಟಸಿವೆ. ಒಂದು ವರ್ಷದ ಹಿಂದೆ ವಾಣಿಜ್ಯ ಕೇಂದ್ರವಾದ ಹೋ ಚಿ ಮಿನ್ಹ್ ಸಿಟಿಯಲ್ಲಿ ಮೂರು ಅಂತಸ್ತಿನ ಕರೋಕೆ ಬಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡು 32 ಜನರು ಸಾವನ್ನಪ್ಪಿದರು. ಆ ಬೆಂಕಿಯಲ್ಲಿ 17 ಜನರು ಗಾಯಗೊಂಡಿದ್ದರು. ಪ್ರಸ್ತುತ ಅವಘಡದಲ್ಲಿ ಬೆಂಕಿ ತಡೆಗಟ್ಟುವ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಾಲೀಕರನ್ನು ಬಂಧಿಸಲಾಗಿದೆ. ದುರಂತದ ನಂತರ, ಪ್ರಧಾನ ಮಂತ್ರಿ ಫಾಮ್ ಮಿನ್ ಚಿನ್ಹ್ ಎಲ್ಲಾ ಅಪಾಯಕಾರಿ ಸ್ಥಳಗಳ ಪರಿಶೀಲನೆಗೆ ಆದೇಶಿಸಿದರು.


Spread the love