ಬೆಂಗಳೂರು;- ಯುಟ್ಯೂಬ್ ವಾಹಿನಿ ಮೇಲೆ ನಟ ಪ್ರಕಾಶ್ ರಾಜ್ ಜೀವ ಬೆದರಿಕೆ ದೂರು ನೀಡಿದ್ದಾರೆ. ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬ್ ಚಾನೆಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜೀವಕ್ಕೆ ಅಪಾಯ ಒಡ್ಡುವ ಬೆದರಿಕೆ ಹಾಕಿರುವ ಆರೋಪದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆಗಸ್ಟ್ 14ರಂದು ಜೀವ ಬೆದರಿಕೆ ಹಾಕುವ ಸಂದೇಶಗಳ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗಿದೆ ಎಂದು ಆರೋಪ.
ಯೂಟ್ಯೂಬ್ನಲ್ಲಿ ಈ ವಾಹಿನಿಯು ಅಪ್ಲೋಡ್ ಮಾಡಿರೋ ಎರಡು ವಿಡಿಯೋಗಳಲ್ಲೂ ಸಹ ಜೀವ ಬೆದರಿಕೆ ಹಾಕುವ ಅಂಶ ಇದೆ ಎಂದು ಆರೋಪಿಸಲಾಗಿದೆ. ಪ್ರಕಾಶ್ ರಾಜ್ ಮತ್ತು ಕುಟುಂಬದವರಿಗೂ ಜೀವ ಬೆದರಿಕೆ ಹಾಕಲಾಗಿದೆ. ಯೂಟ್ಯೂಬ್ ವಾಹಿನಿ ಮುಖ್ಯಸ್ಥ ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೂರು ಕೊಡಲಾಗಿದೆ. ಪ್ರಕಾಶ್ ರಾಜ್ ದೂರು ಹಿನ್ನೆಲೆಯಲ್ಲಿ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.