Spread the love

ಬೆಂಗಳೂರು;- ನಾಳೆ 150ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಗಳೂರು ಬಂದ್​ಗೆ ಕರೆಕೊಟ್ಟಿದ್ದು, ಕಾವೇರಿಗಾಗಿ ಇಡೀ ಬೆಂಗಳೂರು ನಗರ ನಾಳೆ ಸ್ತಬ್ಧವಾಗಲಿದೆ.

ನಾಳೆ ಬೆಂಗಳೂರಿನಲ್ಲಿ ನಿಮಗೆ ಏನೂ ಸಿಗೋದಿಲ್ಲ, ಬಸ್ ಬರಲ್ಲ, ಆಟೋ ಓಡಲ್ಲ, ಟ್ಯಾಕ್ಸಿನೂ ಸಿಗಲ್ಲ. ಅಂಗಡಿಗಳಿರಲ್ಲ, ಉದ್ಯಮಗಳಿರಲ್ಲ, ಮಾರ್ಕೆಟ್ ಇರಲ್ಲ. 150ಕ್ಕೂ ಹೆಚ್ಚು ಸಂಘಟನೆಗಳಿಂದ ನಾಳೆ ಬೆಂಗಳೂರು ಬಂದ್ ಆಗಲಿದೆ. ಚಿಕ್ಕಪೇಟೆಯಲ್ಲಿ 3000 ಅಂಗಡಿಗಳೂ ಓಪನ್ ಆಗಲ್ಲ,

ನಾಳೆ ಯಾರೂ ಕೂಡಾ ಬೆಂಗಳೂರಿಗೆ ಬರಲೇ ಬೇಡಿ, ಬೆಂಗಳೂರಿನಲ್ಲಿ BMTC ಬಸ್ ಓಡಾಡೋಲ್ಲ , ಡಿಪೋದಿಂದ ಯಾರೂ ಬಸ್ ಹೊರಗೆ ತೆಗೆಯೋದಿಲ್ಲ ಎಂದು ನೌಕರರ ಸಂಘದ ಅಧ್ಯಕ್ಷ ಅನಂತ ಸುಬ್ಬರಾವ್ ಘೋಷಣೆ ಮಾಡಿದ್ದಾರೆ. ಓಲಾ, ಊಬರ್ ಸೇರಿ ಎಲ್ಲಾ ಟ್ಯಾಕ್ಸಿ ಸಂಘಟನೆಗಳಿಂದ್ಲೂ ಬಂದ್​ಗೆ ಸಾಥ್​ ನೀಡಿದೆ.


Spread the love